Advertisement

ಎಸ್ಸಿ, ಎಸ್ಟಿ, ಮೀಸಲಾತಿ ಹೆಚ್ಚಳ; ಮೊದಲು ಧ್ವನಿ ಎತ್ತಿದ್ದೆ ನಾವು : ಶ್ರೀರಾಮುಲು

03:51 PM Oct 26, 2022 | Team Udayavani |

ಕುರುಗೋಡು : ಸಮೀಪದ ಸೋಮಲಾಪುರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪೂರ್ತಿ ಪ್ರತಿಷ್ಠಾಪನೆ ಯನ್ನು ಸಚಿವ ಬಿ. ಶ್ರೀರಾಮುಲು ಹಾಗೂ ಶಾಸಕ ಜೆ. ಎನ್. ಗಣೇಶ್ ನೆರೆವೇರಿಸಿದರು.

Advertisement

ನಂತರ ಸಚಿವ ಶ್ರೀರಾಮುಲು ಮಾತನಾಡಿ, ಮಹರ್ಷಿ ವಾಲ್ಮೀಕಿ ಜ್ಞಾನದ ಆಗರವಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ತಮ್ಮಲ್ಲಿನ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸಿದ್ದಾರೆ’ ಎಂದು ಹೇಳಿದರು.

ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು ಹಾಗೂ ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಮತ್ತು ಪರಿಹಾರವಿದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ’ ಎಂದರು.

ಸಮಾಜದವರು ಮಕ್ಕಳಿಗೆ ವಾಲ್ಮೀಕಿ ಜೀವನದ ಕುರಿತು ತಿಳಿಸಬೇಕು. ಉತ್ತಮ ಶಿಕ್ಷಣ ಕೊಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಳ ಸಮುದಾಯವಾದ ಈ ಸಮಾಜಕ್ಕೆ ರಾಜಕೀಯವಾಗಿ ಸಿಕ್ಕಿರುವ ಮೀಸಲಾತಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗಬೇಕಾಗಿದೆ ಎಂದು ಹೇಳಿದರು.

ವಾಲ್ಮೀಕಿ ಮಹಾನ್ ವ್ಯಕ್ತಿಯಾಗಿದ್ದು, ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ರಾಜ್ಯದ ಎಸ್ಸಿ, ಎಸ್ಟಿ ಸಮುದಾಯದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಳ ಕುರಿತು ಈಗಾಗಲೇ ಸರಕಾರದಿಂದ ಕೊಡಿಸಲಾಗಿದ್ದು, ಸಮುದಾಯದ ಜನರಿಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ ಎಂದರು.

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಮೊದಲು ದ್ವನಿ ಎತ್ತಿದ್ದೆ ನಾವು ಇಂದು ಅದಕ್ಕೆ ಪ್ರತಿ ಫಲ ಸಿಕ್ಕಿದೆ ಸಮುದಾಯದ ಜನರಿಗೆ ರಾಮುಲು ಏನು ಅಂತ ಗೊತ್ತಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ 2023 ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಗಳಾದ ಬಿ. ನಾರಾಯಪ್ಪ, ರಾಜು ನಾಯಕ, ಅವರು ತಮ್ಮ ತಮ್ಮ ಸಂಗಡಿಗರ ಹಾಗೂ ಅಭಿಮಾನಿಗಳ ಮುಖಂತರ ತಮಟೆ ಬಾರಿಸುತ್ತ ಕೇಕೆ ಹಾಕುತ್ತ ವೇದಿಕೆ ಕಡೆ ಆಗಮಿಸಿದರೆ ಇತ್ತ ಹಾಲಿ ಶಾಸಕ ಗಣೇಶ್ ಕೂಡ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆಗೆ ಅದ್ದೂರಿಯಾಗಿ ಕಂಡರೂ ಇನ್ನೂ ಮಾಜಿ ಶಾಸಕ ಸುರೇಶ್ ಬಾಬು ಮತ್ತು ಸಚಿವ ಶ್ರೀರಾಮುಲು ಅದ್ದೂರಿಯಾಗಿ ಅಭಿಮಾನಿಗಳ ಮತ್ತು ಕಾರ್ಯಕರ್ತರ ಜೊತೆಗೆ ತೆರಳಿ ಪುತ್ಥಳಿ ಅನಾವರಣ ಗೊಳಿಸಿದ ಸಂದರ್ಭ ಕಂಡು ಬಂದಿತು.

ದೇವಸ್ಥಾನ ದಲ್ಲಿ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಷಡಕ್ಷರಿ ಅವದೂತ ಸ್ವಾಮಿಗಳು, ಶಾಸಕ ಗಣೇಶ್, ಮಾಜಿ ಶಾಸಕ ಸುರೇಶ್ ಬಾಬು, ರಾಮಸಾಗರ ನಾರಾಯಣಪ್ಪ, ರಾಜು ನಾಯಕ, ನಿವೃತ್ತ ಪಿಎಸ್ ಐ ಕೃಷ್ಣಮೂರ್ತಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಂಘ ಸಂಸ್ಥೆಯ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next