Advertisement

ಎಸ್‌ಸಿ, ಎಸ್‌ಟಿ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಪ್ರತಿಭಟನೆ

11:10 PM Nov 20, 2019 | Sriram |

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಬ್ಬಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತೆರವುಗೊಳಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕಾದಿರಿಸಿದ 16 ಪರವಾನಿಗೆಗಳನ್ನು ಪ.ಜಾ. ಮತ್ತು ಪಂಗಡದ ಹೆಸರಿನಲ್ಲಿ ಮೇಲ್ವರ್ಗದ ದುರ್ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸುತ್ತಿರುವ ಬಗ್ಗೆ ಎಸಿಬಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಉಡುಪಿ ಜಿಲ್ಲಾ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

Advertisement

ಜಿಲ್ಲೆಯ ನದಿ ದಂಡೆಗಳಲ್ಲಿ ವಾಸ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮರಳು ತೆಗೆಯುವ ಕಾರ್ಮಿಕರು ಸಾಂಪ್ರದಾಯಿಕ ರೀತಿಯಲ್ಲಿ ತಲೆತಲಾಂತರಗಳಿಂದ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕೆಲಸಮಾಡಿಕೊಂಡು ಬಂದಿದ್ದಾರೆ. ದಸಂಸದ ಹೋರಾಟದ ಫ‌ಲವಾಗಿ ಮೀಸಲಾತಿ ಅಡಿಯಲ್ಲಿ 2016-17ನೇ ಸಾಲಿನಿಂದಒಟ್ಟು 17 ಪರವಾನಿಗೆಗಳನ್ನು ಇವರಿಗೆ ಮರಳು ಉಸ್ತುವಾರಿ ಸಮಿತಿ ಮಂಜೂರು ಮಾಡಲಾಗಿದೆ.

ಆದರೆ ಉಡುಪಿ ಹೊಯಿಗೆ ದೋಣಿ ಕಾರ್ಮಿಕರ ಸಂಘವು ಈ ಪರವಾನಿಗೆಯನ್ನು ತನಗೆ ಬೇಕಾದ ಮರಳು ಕಾರ್ಮಿಕರಲ್ಲದ ಪರಿಶಿಷ್ಟ ಜಾತಿ ವ್ಯಕ್ತಿಯನ್ನು ಬಳಸಿಕೊಂಡು ಮೇಲ್ವರ್ಗದವರಿಗೆ ನೀಡಿ ಪರವಾನಿಗೆಯ ದುರ್ಬಳಕೆ ಮಾಡಿಕೊಂಡು ಅರ್ಹರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಸಂಘದ ಗೌರವಾಧ್ಯಕ್ಷ ಉದಯಕುಮಾರ್‌ ತಲ್ಲೂರ್‌ ಆರೋಪಿಸಿದರು.

ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿ ತನಿಖೆಮಾಡಲು ದಾಖಲೆ ಸಹಿತ ಮನವಿ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ನಿರ್ಲಕ್ಷ್ಯ ವಹಿಸಿದೆ. ಇಂಥ ಪ್ರಕರಣ ನಮ್ಮಲ್ಲಿ ನಡೆದಿಲ್ಲ ಎಂದು ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಿಂಬರಹ ನೀಡಿದೆ ಎಂದು ಉದಯಕುಮಾರ್‌ ತಲ್ಲೂರು ದೂರಿದರು.

ಐರೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕೃಷ್ಣ ಬಾಳುRದ್ರು ಅವರ ಮರಳು ಪರವಾನಿಗೆಯನ್ನು ದಲಿತೇತರರಾದ ಡ್ಯಾನಿಸ್‌ ಡಿ’ಸೋಜ ಹಾಗೂ ಥಾಮಸ್‌ ಡಿ’ಸೋಜ ಅವರು ಮರಳು ದಂಧೆ ನಡೆಸುತ್ತಿರುವುದು ಸಾಬೀತಾಗಿದೆ ಎಂದರು.

Advertisement

ಕೃಷ್ಣ ಬಾಳುRದ್ರು ಕೋಟ ಠಾಣೆಯಲ್ಲಿ ದಲಿತ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೂ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ವಿಫ‌ಲವಾಗಿದೆ. ಹೀಗಾಗಿ ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಸಂಘ ಪ್ರತಿಭಟನೆ ನಡೆಸಿದೆ ಎಂದರು. ಪ್ರತಿಭಟನಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಿಜಯ್‌ ಕೆ.ಎಸ್‌., ಉಪಾಧ್ಯಕ್ಷ ಪ್ರಶಾಂತ್‌ ತೊಟ್ಟಂ, ಪ್ರಧಾನ ಕಾರ್ಯದರ್ಶಿ ಶೇಖರ ಹೆಜಮಾಡಿ, ಸುರೇಶ್‌ ಬಂಟಕಲ್‌, ಕೃಷ್ಣ ಅಲ್ತಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next