Advertisement

ಎಸ್ ಸಿ, ಎಸ್ ಟಿ ಸಮುದಾಯಗಳು ಭಾರತದ ಅಸ್ಮಿತೆ : ಸಿಎಂ ಬೊಮ್ಮಾಯಿ

04:56 PM Jan 07, 2023 | Team Udayavani |

ಮೈಸೂರು : ಎಸ್ ಸಿ, ಎಸ್ ಟಿ ಸಮುದಾಯಗಳು ಭಾರತದ ಅಸ್ಮಿತೆಯಾಗಿವೆ. ಎರಡು ಸಮುದಾಯಗಳಿಗೂ ಶಕ್ತಿ ತುಂಬುವ ಅಗತ್ಯವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ಮೈಸೂರಿನ ಲಲಿತಮಹಲ್ ಪ್ಯಾಲೇಸ್ ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಎಸ್ ಸಿ, ಎಸ್ ಟಿ ಸಮುದಾಯ ಒಟ್ಟಿಗೆ ಇದ್ದರೆ ‌ಬಲ ಜಾಸ್ತಿಯಾಗಲಿದೆ. ದೇಶದ ಆರ್ಥಿಕ ವ್ಯವಸ್ಥೆ ದುಡಿಯುವ ಕೆಳವರ್ಗದ ಕೈಯಲ್ಲಿದೆ. ದುಡಿಯುವ ವರ್ಗ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ತಳ ಸಮುದಾಯಗಳು ಸ್ವಾಭಿಮಾನಿ ಸ್ವಾವಲಂಬಿಯಾಗುವ ಅಗತ್ಯವಿದೆ. ನಾವು ಯಾರಿಗೂ ಕಡಿಮೆಯಿಲ್ಲ, ನಮಗೆ ಯಾರದೇ ಅನುಕಂಪದ ಅಗತ್ಯ ಇಲ್ಲ ಎಂಬ ಮನೋಭಾವನೆಯಿಂದ ಮುನ್ನಡೆಯಬೇಕು ಎಂದರು.

ಇದನ್ನೂ ಓದಿ :ಕಾಂಗ್ರೆಸ್ ನಾಯಕರು ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ : ಸಿ.ಟಿ.ರವಿ ಕಿಡಿ

ಅಂಬೇಡ್ಕರ್ ಪರಮ ಶ್ರೇಷ್ಠ ವ್ಯಕ್ತಿ. ನಾನು ಸಹ ಅಂಬೇಡ್ಕರ್ ವಾದಿಯೆಂದು ಗರ್ವದಿಂದ ಹೇಳುತ್ತೇನೆ. ಅಂಬೇಡ್ಕರ್ ನಂಬರ್ ಒನ್ ದೇಶ ಭಕ್ತರಾಗಿದ್ದರು.ಅಂಬೇಡ್ಕರ್ ಸಂಸತ್ ಗೆ ಬರಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷ ಇದೀಗ ಅಂಬೇಡ್ಕರ್ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿದೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜಾಗ ಕೊಡಲಿಲ್ಲ‌. ಆದರೆ ದಲಿತರ ಮತ ಪಡೆಯಲು ಕಾಂಗ್ರೆಸ್ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ದಲಿತ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸಿಎಂ ಹೇಳಿದರು.

Advertisement

ಬಿಜೆಪಿ ಎಸ್ ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವು ಮಂದಿ ಕೇಂದ್ರ ಸಚಿವರು, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next