Advertisement
ಎಲ್ ನಾಗೇಶ್ವರ ರಾವ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠವು ಕೋವಿಡ್ -19 ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಕೋರಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಮಾಜಿ ಸದಸ್ಯ ಜಾಕೋಬ್ ಪುಲಿಯಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಕೋವಿಡ್ -19 ಲಸಿಕೆಯಿಂದ ಜನರ ಮೇಲೆ ಆಗುವ ದುಷ್ಪರಿಣಾಮಗಳ ದತ್ತಾಂಶಗಳು ಸಾರ್ವಜನಿಕರಿಗೂ ತಿಳಿಯುವಂತೆ ಕೇಂದ್ರ ಮಾಡಬೇಕೆಂದು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
Related Articles
Advertisement
ಇನ್ನು, ಅರ್ಜಿದಾರರಿಗೆ ಪ್ರಶ್ನಿಸಿದ ನ್ಯಾಯಮೂರ್ತಿಗಳು, “ದೇಶ, ಲಸಿಕೆ ಪಡೆಯುವುದಕ್ಕೆ ಜನರು ಹಿಂಜರಿಕೆ ಮಾಡಿಕೊಳ್ಳಬಾರದು ಎನ್ನುವ ಬಗ್ಗೆ ಕಾರ್ಯ ಯೋಜನೆಯಲ್ಲಿದೆ . ಇಂತಹ ಅರ್ಜಿಗಳು ಜನರ ಮನಸ್ಸಿನಲ್ಲಿ ಅನುಮಾನವನ್ನು ಸೃಷ್ಟಿಸುತ್ತವೆ ಎಂದು ನೀವು ಭಾವಿಸುವುದಿಲ್ಲವೇ?” ಎಂದು ಕೇಳಿದ್ದಾರೆ. ಮಾತ್ರವಲ್ಲದೇ, ನ್ಯಾಯಾಲಯವು “ಲಸಿಕೆ ಹಿಂಜರಿಕೆಯನ್ನು ಉತ್ತೇಜಿಸುತ್ತಿದೆ” ಎನ್ನುವಂತಾಗಬಾರದು ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಇದು “ಲಸಿಕೆ ವಿರೋಧಿ ಅರ್ಜಿ” ಅಲ್ಲ ಅಥವಾ ಅರ್ಜಿದಾರರು ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಲಸಿಕೆ ಪ್ರಯೋಗಗಳಲ್ಲಿ ಪಾರದರ್ಶಕತೆ ಅಗತ್ಯ ಮತ್ತು ಡೇಟಾವನ್ನು ಬಹಿರಂಗಪಡಿಸುವುದರಿಂದ ಎಲ್ಲಾ ಅನುಮಾನಗಳನ್ನು ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೋಟ್ಯಂತರ ರೂ.ವಂಚನೆ ಆರೋಪ : ಬಂಧನದ ಭೀತಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ?