Advertisement

ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕ: ಹೊಸ ಆದೇಶಕ್ಕೆ ಸುಪ್ರೀಂ ನಕಾರ

11:50 AM Jan 13, 2017 | udayavani editorial |

ಹೊಸದಿಲ್ಲಿ : ಆಂಧ್ರಪ್ರದೇಶದಲ್ಲಿ  ಮಕರ ಸಂಕ್ರಾಂತಿ ಸಂದರ್ಭದಲ್ಲಿ  ಅತ್ಯಂತ ಪ್ರಸಿದ್ಧವಾಗಿರುವ, ಕೋಟಿಗಟ್ಟಲೆ ರೂ. ಬೆಟ್ಟಿಂಗ್‌ ನಡೆಯುವ ಕೋಳಿ ಅಂಕ (ಕುಕ್ಕುಟ ಕದನ/cock fight) ಸಂಬಂಧಿಸಿದಂತೆ ಯಾವುದೇ ಹೊಸ ಆದೇಶ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Advertisement

ಆಂಧ್ರ ಪ್ರದೇಶ ಹೈಕೋರ್ಟ್‌ ಕಾಕ್‌ ಫೈಟ್‌ ನಿಷೇಧಿಸಿ ನೀಡಿರುವ ನಿರ್ದೇಶವನ್ನು ರಾಜ್ಯಾಡಳಿತೆಯು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂದು ದೂರಿಕೊಂಡು ಸಲ್ಲಿಸಲಾಗಿದ್ದ ಅರ್ಜಿಯ ಮೇಲೆ ಯಾವುದೇ ಹೊಸ ಆದೇಶ ಹೊರಡಿಸುವುದಕ್ಕೆ ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು ಇಂದು ನಿರಾಕರಿಸಿತು.

ಸಾಮಾಜಿಕ ಕಾರ್ಯಕರ್ತೆ ಗೌರೀ ಮೌಲೇಖೀ ಅವರು ರಾಜ್ಯದ ಆಡಳಿತೆಯು ಕಾಕ್‌ ಫೈಟ್‌ ನಿಷೇಧಿಸಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸರಿಯಾಗಿ ಅನುಷ್ಠಾನಿಸಲಾಗುತ್ತಿಲ್ಲ ಎಂದು ದೂರಿ ಈ ಬಗ್ಗೆ ಹೊಸ ಆದೇಶ ಹೊರಡಿಸಲು ಕೋರಿದ್ದರು. 

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಆಂಧ್ರ ಪ್ರದೇಶದಲ್ಲಿ ಕುಕ್ಕುಟ ಕದನ ಅಥವಾ  ಕೋಳಿ ಅಂಕ ಅಥವಾ ಕಾಕ್‌ ಫೈಟ್‌ ನಡೆಸುವುದು ವಾಡಿಕೆಯಾಗಿದ್ದು ಕೋಟಿಗಟ್ಟಲೆ ರೂ. ಹಣದ ಬೆಟ್ಟಿಂಗ್‌ ಈ ಸಾಂಪ್ರದಾಯಿಕ ಕ್ರೀಡೆಯಲ್ಲಿ  ನಡೆಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next