Advertisement

ವೊಡಾಫೋನ್‌ ಸಲ್ಲಿಸಿದ ಪ್ರಸ್ತಾವಣೆಯನ್ನು ನಿರಾಕರಿಸಿದ ಸುಪ್ರೀಂ

09:44 AM Feb 18, 2020 | Sriram |

ಹೊಸದಿಲ್ಲಿ: ದೂರ ಸಂಪರ್ಕ ಕಂಪನಿಗಳು ತಮ್ಮ ಬಾಕಿಗಳನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು, ಆದರೆ ನಿಗದಿತ ಸಮಯಕ್ಕೆ ಬಾಕಿಯನ್ನು ಪಾವತಿಸಲು ವಿಫ‌ಲವಾಗಿರುವ ವೊಡಾಫೋನ್‌ನ ಪ್ರಸ್ತಾಪವನ್ನು ನ್ಯಾಯಾಲಯ ತಿರಸ್ಕರಿಸಿದೆ.

Advertisement

ಸೋಮವಾರ ರಂದು 2,500 ಕೋಟಿ ರೂ. ಮತ್ತು ಶುಕ್ರವಾರದ ವೇಳೆಗೆ 1,000 ಕೋಟಿ ರೂ. ಪಾವತಿಸುವ ಪ್ರಸ್ತಾವನೆಯನ್ನು ವೊಡಾಫೋನ್‌ ಸಲ್ಲಿಸಿದ್ದು, ಇದನ್ನು ಸ್ವೀಕಾರ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಹಿರಿಯ ವಕೀಲ ಮುಕುಲ್‌ ರೋಹrಗಿ ವೊಡಾಫೋನ್‌ ಪರವಾಗಿ ಈ ಬೇಡಿಕೆಯನ್ನು ಸಲ್ಲಿಸಿದ್ದು, ಸೋಮವಾರ 2,500 ಕೋಟಿ ರೂ. ಮತ್ತು ಶುಕ್ರವಾರದ ವೇಳೆಗೆ 1,000 ಕೋಟಿ ರೂ. ಪಾವತಿಸಲು ಸಿದ್ಧರಿದ್ದೇವೆ ಆದರೆ, ಕಂಪನಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ರೋಹrಗಿ ಮನವಿ ಮಾಡಿದ್ದರು. ಆದರೆ ಈ ಪ್ರಸ್ತಾವನೆ ಅರ್ಜಿಯನ್ನು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ನಿರಾಕರಿಸಿದೆ.

ಒಟ್ಟು 4 ಸಾವಿರದ 729 ಕೋಟಿ ರೂಪಾಯಿ ಸ್ಪೆಕ್ಟ್ರಮ್‌ ಶುಲ್ಕಬಾಕಿ ಮತ್ತು 28 ಸಾವಿರದ 309 ಕೋಟಿ ರೂಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53 ಸಾವಿರದ 38 ಕೋಟಿ ರೂಪಾಯಿಗಳನ್ನು ವೊಡಾಫೋನ್‌ ಐಡಿಯಾ ಕಂಪೆನಿ ಸರಕಾರಕ್ಕೆ ಪಾವತಿಸಬೇಕಾಗಿದು, ಅದನ್ನು ಪಾವತಿಸದಿದ್ದರೆ ಮುಚ್ಚಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next