ನವದೆಹಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಂಡ್ ಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ (ಮಾರ್ಚ್ 18) ಆದೇಶ ನೀಡಿದೆ.
ಇದನ್ನೂ ಓದಿ:Puneeth Rajkumar: ಅಸಹಾಯಕರಿಗೆ ಆಹಾರ ವಿತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸಿಕೊಂಡ ನಮೃತಾ ಗೌಡ
ಬಾಂಡ್ ಗಳನ್ನು ಖರೀದಿಸಿದವರು ಮತ್ತು ದೇಣಿಗೆ ಪಡೆದ ರಾಜಕೀಯ ಪಕ್ಷಗಳ ಜತೆಗಿನ ಸಂಬಂಧವನ್ನು ಗುರುತಿಸಬೇಕಾಗಿದೆ ಎಂದು ಸುಪ್ರೀಂ ಪೀಠ ಹೇಳಿದೆ. ಮಾರ್ಚ್ 21ರೊಳಗೆ ಎಸ್ ಬಿಐ ಎಲ್ಲಾ ವಿವರವನ್ನು ಬಹಿರಂಗಗೊಳಿಸಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ನಿರ್ದೇಶನ ನೀಡಿದೆ.
ಸಾಂವಿಧಾನಿಕ ಪೀಠದಲ್ಲಿ ಜಸ್ಟೀಸ್ ಸಂಜೀವ್ ಖನ್ನಾ, ಜಸ್ಟೀಸ್ ಬಿಆರ್ ಗವಾಯಿ, ಜಸ್ಟೀಸ್ ಜೆಬಿ ಪಾರ್ಡಿವಾಲಾ ಮತ್ತು ಜಸ್ಟೀಸ್ ಮನೋಜ್ ಮಿಶ್ರಾ ಅವರನ್ನೊಳಗೊಂಡಿದೆ. ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮುಚ್ಚಿಡುವ ಅಧಿಕಾರ ಎಸ್ ಬಿಐಗೆ ಇಲ್ಲ. ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ತಾಕೀತು ಮಾಡಿದೆ.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿರುವಂತೆ ಎಲ್ಲಾ ವಿವರಗಳನ್ನು ಬಹಿರಂಗಗೊಳಿಸಬೇಕು. ಈ ವಿಚಾರದಲ್ಲಿ ಇನ್ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.