Advertisement

ಬಹುಮತ ಸಾಬೀತು ಪ್ರಕ್ರಿಯೆಯ ಲೈವ್‌ ಸ್ಟ್ರೀಮಿಂಗ್‌: ಸುಪ್ರೀಂ ಆದೇಶ

11:35 AM May 19, 2018 | udayavani editorial |

ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಯಲ್ಲಿ ಇಂದು ಶನಿವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಂದ ನಡೆಯುವ ಬಹುಮತ ಸಾಬೀತು ಪ್ರಕ್ರಿಯೆಯ ಲೈವ್‌ ಸ್ಟ್ರೀಮಿಂಗ್‌ ಗೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

Advertisement

ಬಹುಮತ ಸಾಬೀತು ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಲೈವ್‌ ಬ್ರಾಡ್‌ಕಾಸ್ಟ್‌ ಅತ್ಯಂತ ಉತ್ತಮ ಉಪಾಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎಸ್‌ ಎ ಬೋಬಡೆ ಮತ್ತು ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠ ಹೇಳಿತು.

ರಾಜ್ಯ ಸರಕಾರದ ಕಾರ್ಯದಶಿಗಳು ಬಹುಮತ ಸಾಬೀತು ಪ್ರಕ್ರಿಯೆ ದಾಖಲೀಕರಣ ಮಾಡಬೇಕೆಂದು ಕೂಡ ಸುಪ್ರೀಂ ಪೀಠ ಹೇಳಿತು. 

ಸ್ಥಳೀಯ ಟಿವಿ ಚ್ಯಾನಲ್‌ಗ‌ಳಿಗೆ ಬಹುಮತ ಸಾಬೀತು ಪ್ರಕ್ರಿಯೆ ಲೈವ್‌ ಫೀಡ್‌ ಒದಗಿಸಲಾಗುವುದು ಮತ್ತು ಆ ಮೂಲಕ ಅವುಗಳಿಗೆ ಕೂಡ ಏಕಕಾಲದ ನೇರ ಪ್ರಸಾರ ಕೈಗೊಳ್ಳಲು ಸಾಧ್ಯವಾಗುವುದು ಎಂದು ಪೀಠ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next