Advertisement

ಪಕ್ಷ ಸಂಘಟನೆಯಲ್ಲಿ ಎಸ್‌ಸಿ ಮೋರ್ಚಾ ಸಕ್ರಿಯ: ಛಲವಾದಿ

10:00 PM Feb 11, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ರಿಂದ 150 ಕ್ಷೇತ್ರ ಗೆಲ್ಲುವುದಕ್ಕೆ ನೆರವಾಗುವ ರೀತಿಯಲ್ಲಿ ಎಸ್‌ಸಿ ಮೋರ್ಚಾ ತನ್ನ ಕಾರ್ಯಚಟುವಟಿಕೆ ನಡೆಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಕರೆ ನೀಡಿದರು.

Advertisement

ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಹಿರಿಯ ತಮಟೆ ಕಲಾವಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುನಿವೆಂಕಟಪ್ಪ ಅವರನ್ನು ಸಮ್ಮಾನಿಸಿ ಮಾತನಾಡಿದ ಅವರು, ಇವತ್ತು ಎಸ್‌ಸಿ ಮೋರ್ಚಾದ 8ನೇ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದೆ. ರಥಯಾತ್ರೆ, ಸಮಾವೇಶಗಳಲ್ಲಿ ಎಸ್‌ಸಿ ಮೋರ್ಚಾವು ಸಕ್ರಿಯವಾಗಿ ಭಾಗವಹಿಸಲು ನಿರ್ಧರಿಸಿದೆ. ಪ್ರತಿ ಜಿಲ್ಲೆಗಳ ಸಮಾವೇಶದಲ್ಲಿ 25 ಸಾವಿರಕ್ಕೂ ಮೀರಿ ನಮ್ಮ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಎಸ್‌ಸಿ ಮೋರ್ಚಾ ರಾಷ್ಟ್ರೀಯ ಪ್ರಭಾರಿ ಸೋಗಲ್‌ ಕುಮಾರ್‌ ಅವರು ಆಗಮಿಸಿದ್ದಾರೆ. ಬಡತನದಲ್ಲಿರುವ ಕಲಾವಿದ ಮುನಿವೆಂಕಟಪ್ಪರಿಗೆ ಸಮ್ಮಾನ ಮಾಡಿ 25 ಸಾ. ರೂ. ಗೌರವಧನ ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಮುನಿವೆಂಕಟಪ್ಪ ಅವರನ್ನು ಗುರುತಿಸುವ ಮೂಲಕ ಇಡೀ ದಲಿತ ಸಮುದಾಯವನ್ನೇ ಗೌರವಿಸಿದಂತಾಗಿದೆ ಎಂದರು.

ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ಉದ್ದೇಶದಿಂದ ಸಭೆ ನಡೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ದಲಿತ ಸಮುದಾಯಗಳು ಮನಸು ಮಾಡಿದರೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿದೆ. ಇದುವರೆಗೆ ಬೇರೆಬೇರೆ ಪಕ್ಷಗಳಿಗೆ ಅವರು ಮತದಾನ ಮಾಡುತ್ತಿದ್ದರು. ಕಾಂಗ್ರೆಸ್‌ ಸುಡುವ ಮನೆ, ಅಲ್ಲಿ ನಿಮಗೆ ಭವಿಷ್ಯ ಇಲ್ಲ ಎಂದು ಡಾ. ಅಂಬೇಡ್ಕರರು ಹೇಳಿದ್ದನ್ನು ಗಮನಿಸಿ, ಬಾಬಾ ಸಾಹೇಬರನ್ನು ಗೌರವಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಬಿಜೆಪಿ ಎಸ್‌. ಸಿ.ಮೋರ್ಚಾ ಉಪಾಧ್ಯಕ್ಷ ದೊಡ್ಡೇರಿ ವೆಂಕಟೇಶ್‌ ಮತ್ತು ಪಕ್ಷದ ಹಾಗೂ ಮೋರ್ಚಾದ ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next