Advertisement
ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮೂರು ಪಕ್ಷಗಳು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದೆ.
Related Articles
Advertisement
ಬಿಜೆಪಿ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಈಗಾಗಲೇ ಸರಕಾರ ರಚನೆಯಾಗಿರುವುದರಿಂದ ರವಿವಾರ ವಿಚಾರಣೆ ನಡೆಸುವ ಅಗತ್ಯವಿರಲಿಲ್ಲ ಎಂದರು. ಆದರೆ ಇದಕ್ಕೆ ಉತ್ತರಿಸಿದ ಪೀಠ, ನಮಗೆ ಈ ಪ್ರಕರಣವನ್ನು ವಿಚಾರಣೆ ನಡೆಸಲು ವಹಿಸಿದ್ದರಿಂದ ನಾವು ಮಾಡುತ್ತೇವೆ ಎಂದಿತು.
ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದಿದ್ದೇವೆ. ಶಾಸಕಾಂಗ ಪಕ್ಷದ ನಾಯಕಾಗದೇ ಡಿಸಿಎಂ ಆಗಲೂ ಸಾಧ್ಯವಿಲ್ಲವೆಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ರಾಜ್ಯಪಾಲರು ತಮಗೆ ನೀಡಿದ ಶಾಸಕರ ಸಹಿಯುಳ್ಳ ಪತ್ರವನ್ನು ಪರಿಶೀಲನೆ ನಡೆಸಬೇಕಿತ್ತು. ಬಹುಮತ ಹೊಂದಿರುವ ಕುರಿತು ಮಾಹಿತಿ ಪಡೆಯಬೇಕು. ಆದರೆ ರಾಜ್ಯಪಾಲರು ಇದನ್ನು ಪಾಲಿಸಿಲ್ಲ. ಹಾಗಾಗಿ ಆದಷ್ಟು ಬೇಗ ವಿಶ್ವಾಸ ಮತಯಾಚನೆಗೆ ನಿರ್ದೇಶಿಸಿ ಎಂದು ಸಿಂಘ್ವಿ ವಾದಿಸಿದರು.
ಕರ್ನಾಟಕದ ಸ್ಪೀಕರ್, ಉತ್ತರಾಖಂಡ್ ಪ್ರಕರಣಗಳನ್ನು ಉಲ್ಲೇಖಿಸಿದ ಸಿಂಘ್ವಿ ಇವತ್ತೇ ವಿಶ್ವಾಸಮತ ಅವಕಾಶಕ್ಕೆ ಕೋರಿದರು.
ಬಿಜೆಪಿ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಕಳೆದ 17 ದಿನ ಯಾಕೆ ಸುಮ್ಮನಿದ್ದರಿ, ಸರಕಾರ ರಚಿಸದೇ ಇದ್ದಿದ್ದು ಯಾಕೆ? ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದರು.
ರಾಜ್ಯಪಾಲರು ವಿವೇಚನಾಧಿಕಾರ ಬಳಸಿ ಯಾರನ್ನೂ ಬೇಕಾದರೂ ಆಹ್ವಾನಿಸುವಂತಿಲ್ಲ ಎಂದ ನ್ಯಾ. ರಮಣ ಇವೆಲ್ಲಾ ಈಗಾಗಲೇ ನಿರ್ಧಾರವಾಗಿರುವ ವಿಚಾರಗಳು ಎಂದರು. ರಾಜ್ಯಪಾಲರು ಏನು ಹೇಳಿದ್ದಾರೆ ಎನ್ನುವುದೇ ನಮಗೆ ಗೊತ್ತಿಲ್ಲ ಎಂದು ನ್ಯಾ ಭೂಷಣ್ ಹೇಳಿದರು.
ಸುಖಾಸುಮ್ಮನೆ ಅರ್ಜಿ ಸಲ್ಲಸಿ ರವಿವಾರ ವಿಚಾರಣೆ ನಡೆಸುವಂತೆ ಮಾಡಿದ್ಧಾರೆ. ನಮಗೆ ವಿಶ್ವಾಸಮತ ಪ್ರದರ್ಶಿಸಲು ಸಮಯ ಕೇಳಿದ್ದೇವೆ ಎಂದು ಮುಕುಲ್ ರೋಹ್ಟಗಿ ವಾದ ಮಂಡಸಿದರು.