Advertisement

ಅಮಾನ್ಯಗೊಂಡ ನೋಟುಗಳ ಜಮೆಗೆ ಇನ್ನೊಂದು ಅವಕಾಶ ? ಕೇಂದ್ರಕ್ಕೆ ಸುಪ್ರೀಂ

11:27 AM Jul 04, 2017 | udayavani editorial |

ಹೊಸದಿಲ್ಲಿ : ಅಪನಗದೀಕರಿಸಲಾದ ನೋಟುಗಳನ್ನು ಯೋಗ್ಯ ಹಾಗೂ ಸಮರ್ಥನೀಯ ಕಾರಣಗಳಿಗಾಗಿ ಬ್ಯಾಂಕ್‌ನಲ್ಲಿ ಜಮೆ ಮಾಡಲು ವಿಫ‌ಲರಾದವರಿಗೆ ಇನ್ನೂ ಒಂದು ಅವಕಾಶವನ್ನು ಕೊಡುವ ಸಾಧ್ಯತೆಯ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನೀಡಿ ಇಂದು ಮಂಗಳವಾರ ಆದೇಶ ಹೊರಡಿಸಿದೆ.

Advertisement

ಅಪನಗದೀಕರಿಸಲಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗೆ ಜಮೆ ಮಾಡುವುದಕ್ಕೆ ಸರಕಾರ ಕಳೆದ ವರ್ಷ ಡಿಸೆಂಬರ್‌ 31ರ ವರೆಗೆ ಕಾಲಾವಕಾಶ ನೀಡಿತ್ತು. ಅನಂತರ ಮಾಚ್‌ 31ರ ವರೆಗಿನ ಕಾಲಾವಕಾಶದಲ್ಲಿ ಆರ್‌ಬಿಐ ನಲ್ಲಿ ವಿನಿಮಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. 

ಇವೆಲ್ಲ ಅವಕಾಶಗಳ ಹೊರತಾಗಿಯೂ ಸಮರ್ಥನೀಯ ಹಾಗೂ ಸರಿಯಾದ ಕಾರಣಗಳಿಗಾಗಿ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ವಿಫ‌ಲರಾದವರಿಗೆ ಇನ್ನೂ ಒಂದು ಅವಕಾಶವನ್ನು ನೀಡಲು ಸಾಧ್ಯವೇ ಎಂಬುದನ್ನು  ಎರಡು ವಾರಗಳ ಒಳಗೆ ತನಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಇದೀಗ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. 

ಕೇಂದ್ರದ ಉತ್ತರವನ್ನು ಇದೀಗ ಕಾತರಿಂದ ಎದುರುನೋಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next