Advertisement

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

02:15 AM May 19, 2022 | Team Udayavani |

ಹೊಸದಿಲ್ಲಿ: ಸ್ಥಳೀಯ ಸಂಸ್ಥೆ ಚುನಾ ವಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡಲು ಸರ್ವೋಚ್ಚ ನ್ಯಾಯಾಲಯ ಬುಧವಾರ ಅನುಮತಿ ನೀಡಿದ್ದು, ಆ ಮೂಲಕ ಮಧ್ಯಪ್ರದೇಶ ಸರಕಾರಕ್ಕೆ ನಿರಾಳತೆ ನೀಡಿದೆ.

Advertisement

ಒಬಿಸಿ ಕೋಟಾ ಇಲ್ಲದೆ ಚುನಾವಣ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಚುನಾವಣ ಆಯೋಗಕ್ಕೆ ಸೂಚಿಸಿ ಮೇ 10ರಂದು ತಾನೇ ಹೊರಡಿಸಿದ್ದ ಆದೇಶ ವನ್ನು ಸುಪ್ರೀಂ ಕೋರ್ಟ್‌ ಈಗ ಪರಿಷ್ಕರಿಸಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ 2ನೇ ವರದಿಯ ಶಿಫಾರಸಿನ ಅನ್ವಯ ಮೀಸಲಾತಿ ಅನುಷ್ಠಾನ ಗೊಳಿಸಿ, ಒಂದು ವಾರದೊಳಗಾಗಿ ಚುನಾವಣ ಅಧಿ ಸೂಚನೆ ಹೊರಡಿಸುವಂತೆ ಮಧ್ಯಪ್ರದೇಶ ಸರಕಾರಕ್ಕೆ ಬುಧ ವಾರ ನ್ಯಾ| ಎ. ಎಂ. ಖಾನ್ವಿಳ್ಕರ್‌ ನೇತೃತ್ವದ ನ್ಯಾಯ ಪೀಠ ಆದೇಶಿಸಿದೆ. ಒಬಿಸಿ ಮೀಸಲಾತಿ ಕಲ್ಪಿಸುವ ಮುನ್ನ ಸು. ಕೋ. ಸೂಚಿಸಿದ್ದ ತ್ರಿವಳಿ ಪರಿಶೀಲನ ಪ್ರಕ್ರಿಯೆ ಯನ್ನು ಸರಕಾರ ಪೂರ್ಣಗೊಳಿಸಿಲ್ಲ.

ಹೀಗಾಗಿ ಒಬಿಸಿ ಮೀಸಲಾತಿಯನ್ನು ಒದಗಿಸದೇ 2 ವಾರಗಳ ಒಳಗಾಗಿ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಎಂದು ಮೇ 10ರ ಆದೇಶದಲ್ಲಿ ನ್ಯಾಯಪೀಠ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದ ಮಧ್ಯಪ್ರದೇಶ ಸರಕಾರ, ನ್ಯಾಯಾಲಯ ಆಕ್ಷೇಪಿಸಿರುವಂಥ ಹಿಂದಿನ ವರದಿಯನ್ನು ನಾವು ಪರಿಷ್ಕರಿಸಿದ್ದೇವೆ ಮತ್ತು ಕ್ಷೇತ್ರ ಪುನರ್‌ವಿಂಗಡಣ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದೇವೆ. ಹೀಗಾಗಿ ಒಬಿಸಿ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿಕೊಂಡಿತ್ತು.

ಎರಡನೇ ವರದಿಯನ್ನು ಪರಿಶೀಲಿಸಿ ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಒಬಿಸಿ ಕೋಟಾದೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸದ್ಯಕ್ಕೆ ಅನುಮತಿ ನೀಡುತ್ತಿದ್ದೇವೆ. ಆದರೆ, ಗರಿಷ್ಠ ಮೀಸಲಾತಿಯು ಶೇ.50ರ ಮಿತಿಯನ್ನು ಮೀರುವಂತಿಲ್ಲ ಎಂದು ಸೂಚಿಸಿದೆ.

Advertisement

ರಾಜ್ಯ ಸರಕಾರಕ್ಕೆ ಮತ್ತಷ್ಟು ಜಿಜ್ಞಾಸೆ
ಬೆಂಗಳೂರು: ಜಿ.ಪಂ.-ತಾ.ಪಂ. ಚುನಾ ವಣೆಯಲ್ಲಿ ಒಬಿಸಿ ಮೀಸಲಾತಿ ಬಗ್ಗೆ ಸರಕಾರ ಗೊಂದಲ ದಲ್ಲಿದ್ದು, ಮಧ್ಯಪ್ರದೇಶಕ್ಕೆ ಸಂಬಂ ಧಿಸಿದ ತೀರ್ಪು ಇನ್ನಷ್ಟು ಜಿಜ್ಞಾಸೆಗೆ ತಳ್ಳಿದೆ.

ಈ ತೀರ್ಪು ಬಹುಪಾಲು ನಮಗೂ ಅನ್ವಯ ಆಗುತ್ತದೆ ಎಂದು ಸರಕಾರದ ಉನ್ನತ ವಲಯ ಹೇಳುತ್ತಿದ್ದರೆ, ಇದು ಮಧ್ಯಪ್ರದೇಶಕ್ಕೆ ಮಾತ್ರ ಅನ್ವಯ ಎಂದು ಪರಿಣಿತರು ಹೇಳುತ್ತಿದ್ದಾರೆ.

ಮೀಸಲಾತಿ ನೀಡದೆ ಚುನಾವಣೆ ನಡೆಸು ವಂತೆ ಸುಪ್ರೀಂಕೋರ್ಟ್‌ ಹೇಳಿತ್ತು. ಆದರೆ ಮಧ್ಯಪ್ರದೇಶದಲ್ಲಿ ಒಬಿಸಿ ಪಟ್ಟಿ ಸಿದ್ಧವಾಗಿದ್ದ ಹಿನ್ನೆಲೆಯಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದ್ದು, ಅದಕ್ಕೀಗ ಅನುಮತಿ ಸಿಕ್ಕಿದೆ. ಆದರೆ ನಮ್ಮ ರಾಜ್ಯದಲ್ಲಿ ಒಬಿಸಿ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಿದ ಹಿಂದಿನ ಎಲ್ಲ ಪ್ರಕ್ರಿಯೆಗಳು ರದ್ದಾಗಿವೆ. ಈಗ ಹೊಸದಾಗಿ ಮೀಸಲಾತಿ ಪಟ್ಟಿ ಆಗಬೇಕು. ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ತಿಳಿಸಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ.

ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ ತ್ವರಿತವಾಗಿ ಚುನಾವಣೆ ನಡೆಸಿ ಎಂದು ಮಧ್ಯಪ್ರದೇಶ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಅದನ್ನು ಎಲ್ಲ ರಾಜ್ಯಗಳು ಪಾಲಿಸಬೇಕು ಎಂದು ನಿರ್ದೇಶಿಸಿತ್ತು. ಆದರೆ ಸುಪ್ರೀಂಗೆ ಕರ್ನಾಟಕ ಸರಕಾರ ಪಕ್ಷಗಾರ ಆಗಿ ರಲಿಲ್ಲ. ಮೇಲಾಗಿ, ಕೋರ್ಟ್‌ ನೀಡಿರುವುದು ಮಧ್ಯಾಂತರ ಆದೇಶವೇ ಹೊರತು ಅಂತಿಮ ಆದೇಶವಲ್ಲ. ರಾಜ್ಯದ ವಸ್ತುಸ್ಥಿತಿಯನ್ನು ಕೋರ್ಟಿಗೆ ಸರಕಾರ ವಿವರಿಸಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next