Advertisement

ಮಹಾ ಸಿಎಂ ಫ‌ಡ್ನವೀಸ್‌ ಆಯ್ಕೆ ಪ್ರಶ್ನಿಸಿದ ಮೇಲ್ಮನವಿ ಅಂತಿಮ ವಿಚಾರಣೆ ಜು.23ಕ್ಕೆ

12:45 PM Jul 04, 2019 | Team Udayavani |

ಹೊಸದಿಲ್ಲಿ : 2014ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರದಲ್ಲಿ ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಕೇಸುಗಳನ್ನು ಬಹಿರಂಗಪಡಿಸದಿರುವ ಮುಖ್ಯಮುಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರ ರಾಜ್ಯ ವಿಧಾನಸಭೆ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ಅಂತಿಮ ವಿಲೇವಾರಿಗೆ ಸುಪ್ರೀಂ ಕೋರ್ಟ್‌ ಇದೇ ಜು.23ರ ದಿನಾಂಕವನ್ನು ಇಂದು ಬುಧವಾರ ನಿಗದಿಸಿದೆ.

Advertisement

ಚೀಫ್ ಜಸ್ಟಿಸ್‌ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ದೀಪಕ್‌ ಗುಪ್ತಾ ಹಾಗೂ ಅನಿರುದ್ಧ ಬೋಸ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠ, ಫ‌ಡ್ನವೀಸ್‌ ಆಯ್ಕೆ ಪ್ರಶ್ನಿಸಿದ ಮೇಲ್ಮನವಿಯ ಅಂತಿಮ ವಿಲೇವಾರಿಯನ್ನು ಜು.23ರಂದು ನಡೆಸಲಾಗುವುದು ಎಂದು ಹೇಳಿತು.

ಅರ್ಜಿದಾರ ಉಕೇ ಅವರ ಮನವಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್‌ ವಜಾ ಮಾಡಿತ್ತು. ಹೈಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next