ನವದೆಹಲಿ: ಹರಿದ್ವಾರದಲ್ಲಿ ಧರ್ಮ ಸಂಸದ್ ನಡೆಸಿ, ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಕೊಟ್ಟಿದೆ.
ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಕೊಡಲಾಗಿದೆ. ತ್ಯಾಗಿ ಅವರಿಗೆ ದ್ವೇಷ ಭಾಷಣದಲ್ಲಿ ಪಾಲ್ಗೊಳ್ಳದಂತೆ, ಯಾವುದೇ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಕೊಡದಂತೆ ನ್ಯಾಯಾಲಯವು ಪ್ರತಿಜ್ಞೆ ಮಾಡಿಸಿಕೊಂಡಿದೆ.
ಇದನ್ನೂ ಓದಿ : ಪರಿಶಿಷ್ಟರ ಸೆಳೆಯಲು ಬಿಜೆಪಿ ಹೊಸ ಗುರಿ: ನಡ್ಡಾ ನೇತೃತ್ವದಲ್ಲಿ ವಿಶೇಷ ಸಭೆ
ಡಿಸೆಂಬರ್‌ನಲ್ಲಿ ದ್ವೇಷ ಭಾಷಣ ಮಾಡಿದ್ದ ಬಗ್ಗೆ ತ್ಯಾಗಿ ಅವರ ವಿರುದ್ಧ ಜ.2ರಂದು ದೂರು ದಾಖಲಾಗಿತ್ತು. ನಂತರ ಬಂಧಿತರಾದ ಅವರು ಉತ್ತರಾಖಂಡ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿತ್ತು.