Advertisement

ದಲಿತ ಕೇರಿಗಿಲ್ಲ ಆಶ್ರಯ ಭಾಗ್ಯ

11:19 AM Dec 23, 2021 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿ ಯ ಜಾಲಿಗೆ ಗ್ರಾಪಂ ವ್ಯಾಪ್ತಿಯ ಅರದೇಶನಹಳ್ಳಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಕಾಲೋನಿ ಯಲ್ಲಿ ಇದುವರೆಗೂ ಆಶ್ರಯ ಭಾಗ್ಯ ಕಲ್ಪಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳು ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ ಎಂಬುದು ದಲಿತ ಕೇರಿ ಜನರ ಆರೋಪವಾಗಿದೆ.

Advertisement

ಸರ್ಕಾರವು ದಲಿತರ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದರೂ ಸಹ ಇಂದಿಗೂ ಸಹ ಮೂಲ ಸೌಕರ್ಯಗಳ ಕೊರತೆ ಹಾಗೂ ಒಂದೊಂದು ಮನೆಯಲ್ಲಿ ಮೂರ್‍ನಾಲ್ಕು ಕುಟುಂಬಗಳು ವಾಸಿಸುವ ಸ್ಥಿತಿ ಬಂದೊದಗಿದೆ. ಸರ್ಕಾರ ಆಶ್ರಯ ಯೋಜನೆಗಳಲ್ಲಿ ಹೆಚ್ಚಿನ ಮನೆ ನೀಡುತ್ತೇವೆ ಎಂದು ಹೇಳುತ್ತಾರೆ. ಕೇವಲ ಸರ್ಕಾರದ ಕಡತಗಳಲ್ಲಿ ಸೀಮಿತವಾಗುತ್ತಿದೆ. ಬಡವರಿಗೆ ನಿವೇಶನದ ಸೂರು ಕನಸಾಗಿಯೇ ಉಳಿಯುತ್ತಿದೆ ಎಂದು ದಲಿತ ಕುಟುಂಬಗಳ ಅಳಲಾಗಿದೆ.

ಡೀಸಿಗೂ ಸಹ ಮನವಿ: ಮಳೆಯಿಂದಾಗಿ ಕಾಲೋನಿಯಲ್ಲಿನ ಸುಮಾರು 3-4 ಮನೆಗಳು ಕುಸಿದಿದ್ದು, ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಮೇಲ್ನೋಟಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಸುಮಾರು ವರ್ಷಗಳಿಂದ ಸ್ಮಶಾನ ಮತ್ತು ನಿವೇಶನಕ್ಕಾಗಿ ಹೋರಾಟ ಮಾಡಲಾಗುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸುತ್ತಿಲ್ಲ.

ಇದನ್ನೂ ಓದಿ: ಜನರ ಉತ್ತಮ ಭವಿಷ್ಯದ ಬದುಕನ್ನು ನಿರ್ಮಿಸುವ ಸರಕಾರ ನಮ್ಮದು: ಸಿಎಂ ಬೊಮ್ಮಾಯಿ

ಈ ಬಗ್ಗೆ ಜಿಲ್ಲಾಧಿಕಾರಿಗೂ ಸಹ ಮನವಿ ಮಾಡಲಾಗಿದೆ ಎಂದು ದಲಿತ ಮುಖಂಡ ಅರದೇಶನಹಳ್ಳಿ ಕುಮಾರ್‌ ಅವರ ಆರೋಪವಾಗಿದೆ. ಈ ಕೇರಿ ಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿಯ 40 ಬಡ ಕುಟುಂಬಗಳು ಬಹುತೇಕ ಕಲ್ಲುಮನೆ, ಸೀಟುಗಳು, ಹೆಂಚಿನ ಮನೆಗಳಲ್ಲಿ ವಾಸವಿದ್ದು, 2 ಸಾವಿರ ಜನಸಂಖ್ಯೆ ಹೊಂದಿದೆ.

Advertisement

ಒತ್ತುವರಿ ಆರೋಪ: ಒಂದೊಂದು ಮನೆಯಲ್ಲಿ 3-4 ಕುಟುಂಬಗಳು ವಾಸವಿದ್ದಾರೆ. ದಲಿತ ಕೇರಿಗೆ ಸ್ಮಶಾನದ ಜಾಗವಿಲ್ಲ. ಸುಮಾರು 80-90 ವರ್ಷದ ಹಿಂದಿನಿಂದಲೂ 10 ಗುಂಟೆ ಜಾಗದ ಸರ್ವೆ ನಂ.57ರಲ್ಲಿ ಸ್ಮಶಾನದ ಜಾಗವಿತ್ತು. ಆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿರುತ್ತಾರೆ.

ವಾಸ್ತವದಲ್ಲಿ ಅದು ಗೋಮಾಳ ಜಾಗವಾಗಿದೆ. ನಿವೇಶನಗಳಿಗಾಗಿ ಸರ್ವೆ ನಂ.69ರಲ್ಲಿ ಸರ್ಕಾರಿ ಜಮೀನು ಇದ್ದು, ಅದನ್ನು ಬಡವರಿಗೆ ನಿವೇಶನಕ್ಕಾಗಿ ಮಂಜೂರು ಮಾಡುವುದನ್ನು ಬಿಟ್ಟು ಆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next