Advertisement

ನಾರದ ಕೇಸ್:ಕೊಲ್ಕತ್ತಾ ಹೈಕೋರ್ಟ್ ವಿರುದ್ಧದ ಅರ್ಜಿ ಹಿಂತೆಗೆತಕ್ಕೆ ಸಿಬಿಐಗೆ ಸುಪ್ರೀಂ ಅವಕಾಶ

08:09 PM May 25, 2021 | Team Udayavani |

ಕೊಲ್ಕತ್ತಾ :  ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ನ ನಾಯಕರನ್ನು ಗೃಹಬಂಧನದಲ್ಲಿರಿಸುವ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸದ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೋಂ ಕೋರ್ಟ್,  ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಇಂದು(ಮಂಗಳವಾರ, ಮೇ 25) ಅವಕಾಶ ನೀಡಿದೆ.

Advertisement

ಇದನ್ನೂ ಓದಿ : ಅಪಘಾತದಂತೆ ಬಿಂಬಿಸಿ ವ್ಯಕ್ತಿಯ ಕೊಲೆ ; ಇಬ್ಬರ ಬಂಧನ : ಕೊಲೆಗೆ ಕಾರಣವಾಯ್ತು ಅಕ್ರಮ ಸಂಬoಧ

ಕೊಲ್ಕತ್ತಾ ಹೈಕೋರ್ಟ್‌ ನ ಪಂಚ ಸದಸ್ಯ ನ್ಯಾಯ ಪೀಠ ಈಗಾಗಲೇ ನಾರದ ಪ್ರಕರಣವನ್ನು ವಿಚಾರಣೆ ಮಾಡುತ್ತಿದ್ದು, ಸಿಬಿಐ ಪರ ವಾದಿಸುತ್ತಿರುವ ಸೋಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಅರ್ಜಿ ಹಿಂಪಡೆಯಲು ಮತ್ತು ಹೈಕೋರ್ಟ್‌ ನಲ್ಲಿ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

ಇನ್ನು, ಈ ಕುರಿತು ಪ್ರತಿಕ್ರಿಯಿಸಿದ  ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿನೀತ್‌ ಸರನ್‌ ಮತ್ತು ಬಿಆರ್‌ ಗವಾಯಿ, ನಾರದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ವಿಷಯದ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಆದರೇ, ನಮ್ಮ ಹೇಳಿಕೆಯು ಪ್ರಕರಣಕ್ಕೆ ಸಂಬಂಧಿಸಿದ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.

ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ನ ಪಂಚಾಯತ್ ಸಚಿವರಾದ ಸುಬ್ರತಾ ಮುಖರ್ಜಿ, ಸಾರಿಗೆ ಸಚಿವ ಫಿರ್ಹಾದ್,  ಶಾಸಕ ಮದನ್ ಮಿತ್ರಾ, ಕೊಲ್ಕತ್ತಾದ ಮಾಜಿ ಮೇಯರ್ ಸೊವನ್ ಚಟರ್ಜಿ ಅವರನ್ನು ಸಿಬಿಐ ಬಂಧಿಸಿತ್ತು.

Advertisement

ಇದನ್ನೂ ಓದಿ : ಅಂತರರಾಜ್ಯ ಕಳ್ಳನ ಬಂಧನ: 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next