Advertisement

ಆಧಾರ್‌ ಲಿಂಕ್‌: ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ

06:42 PM Oct 31, 2022 | Team Udayavani |

ನವದೆಹಲಿ: ಮತದಾರರ ಗುರುತಿನ ಚೀಟಿಗಳನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.

Advertisement

ಯಾವುದಾದರೂ ಅನುಕೂಲತೆ, ಸೌಲಭ್ಯವನ್ನು ಒದಗಿಸುವ ವೇಳೆ ಆಧಾರ್‌ ಅನ್ನು ಕಡ್ಡಾಯ ಮಾಡಬಹುದು. ಆದರೆ, ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂಬ 2019ರ ಆಧಾರ್‌ ತೀರ್ಪನ್ನು ಪ್ರಸ್ತಾಪಿಸಿರುವ ಅರ್ಜಿದಾರರು, “ಇಂಥ ಹಕ್ಕುಗಳ ಪೈಕಿ ಮತದಾನದ ಹಕ್ಕು ಅತ್ಯಂತ ಅಮೂಲ್ಯವಾದದ್ದು.

ಹೀಗಾಗಿ, ಆಧಾರ್‌ ಇಲ್ಲ ಎಂಬ ಕಾರಣಕ್ಕೆ ದೇಶದ ನಾಗರಿಕನಿಗೆ ಮತದಾನದ ಪವಿತ್ರ ಹಕ್ಕನ್ನು ನಿರಾಕರಿಸಬಾರದು’ ಎಂದು ವಾದಿಸಿದ್ದಾರೆ. ಅರ್ಜಿದಾರರಾದ ಮೇಜರ್‌ ಜನರಲ್‌ ಎಸ್‌.ಜಿ. ವೊಂಬತ್‌ಕೆರೆ ಅವರ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ವಾದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next