Advertisement

35ಎ ವಿಧಿಯ ಸಿಂಧುತ್ವ: ಆ.27ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

11:30 AM Aug 06, 2018 | Team Udayavani |

ಹೊಸದಿಲ್ಲಿ : ಸಂವಿಧಾನದ 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 27ಕ್ಕೆ ಮುಂದೂಡಿದೆ.

Advertisement

ಸಂವಿಧಾನದ 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವ ಕುರಿತಾಗಿ ಸುಪ್ರೀಂ ಕೋರ್ಟಿನಿಂದ ಇವತ್ತು ಯಾವ ರೀತಿಯ ತೀರ್ಪು ಬರುವುದೆಂಬ ಬಗ್ಗೆ ಇಡಿಯ ದೇಶವೇ ಕಾತರದಿಂದಿತ್ತು. 

ಸಂವಿಧಾನದ 35ಎ ವಿಧಿಯು ಜಮ್ಮು ಕಾಶ್ಮೀರದ “ಕಾಯಂ ನಿವಾಸಿಗಳ” ವ್ಯಾಖ್ಯಾನ ಮಾಡುವ ಅಧಿಕಾವನ್ನು ರಾಜ್ಯವಿಧಾನ ಸಭೆಗೆ ನೀಡುತ್ತದೆ ಮಾತ್ರವಲ್ಲದೆ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕನ್ನು ಕೂಡ ನೀಡುತ್ತದೆ. 

ಇಂದು ವಿಚಾರಣೆ ಕೈಗೊಳ್ಳಬೇಕಿದ್ದ ಸುಪ್ರಿಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೈಕಿ ಒಬ್ಬರು ಗೈರಾಗಿರುವ ಕಾರಣ, ವಿಚಾರಣೆಯನ್ನು ಪೀಠವು ಆಗಸ್ಟ್‌ 27ಕ್ಕೆ ನಿಗದಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next