Advertisement

SBI: ವಿತ್‌ಡ್ರಾ ಮಿತಿ ಇಂದಿನಿಂದ ಜಾರಿ

12:17 AM Oct 31, 2018 | Team Udayavani |

ಹೊಸದಿಲ್ಲಿ: ಎಸ್‌.ಬಿ.ಐ. ಗ್ರಾಹಕರು ಇನ್ನು ಮುಂದೆ ಎಟಿಎಂನಿಂದ ದಿನಕ್ಕೆ ಗರಿಷ್ಠ 20 ಸಾವಿರ ರೂ.ಗಳನ್ನು ಮಾತ್ರವೇ ವಿತ್‌ಡ್ರಾ ಮಾಡಬಹುದು. ವಿತ್‌ ಡ್ರಾಗೆ ಮಿತಿ ಹೇರಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಅಕ್ಟೋ ಬರ್‌ 1ರಂದು ಹೊರಡಿಸಿದ್ದ ಆದೇಶವು ಬುಧವಾರ (ಅ.31)ದಿಂದ ಜಾರಿಯಾಗಲಿದೆ. ಎಸ್‌ಬಿಐ ಕ್ಲಾಸಿಕ್‌ ಅಥವಾ ಮಾಯೆಸ್ಟ್ರೋ ಡೆಬಿಟ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಈ ಹಿಂದೆ ಎಸ್‌ಬಿಐ ಎಟಿಎಂನಲ್ಲಿ ದಿನದ ವಿತ್‌ ಡ್ರಾ ಮಿತಿ 40 ಸಾವಿರ ರೂ.ಗಳಾಗಿತ್ತು. ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎಸ್‌ಬಿಐ ಈ ನಿರ್ಧಾರ ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next