Advertisement

ಎಸ್‌ಬಿಐ: ಬಡ್ಡಿಯಲ್ಲಿ ಕಡಿತ

02:08 AM May 01, 2019 | Sriram |

ಹೊಸದಿಲ್ಲಿ: ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ)ದ ಉಳಿತಾಯ ಬ್ಯಾಂಕ್‌ ಖಾತೆಯಲ್ಲಿ ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತವನ್ನು ಇಟ್ಟುಕೊಂಡಿರುವ ಖಾತೆದಾರರು ಬುಧವಾರದಿಂದ ಕಡಿಮೆ ಬಡ್ಡಿಯನ್ನು ಪಡೆಯಲಿದ್ದಾರೆ.

Advertisement

ಎಸ್‌ಬಿಐ ತನ್ನ ಉಳಿತಾಯ ಖಾತೆಯ ಮೊತ್ತದ ಬಡ್ಡಿ ದರವನ್ನು ಆರ್‌ಬಿಐನ ರೆಪೋ ದರದೊಂದಿಗೆ ಲಿಂಕ್‌ ಮಾಡುತ್ತಿದ್ದು, ಇದರ ಪರಿಣಾಮವಾಗಿ ಖಾತೆದಾರರು ಕೇವಲ ಶೇ.2.75ರಷ್ಟು ಬಡ್ಡಿಯನ್ನು ಮಾತ್ರವೇ ಪಡೆಯಲಿದ್ದಾರೆ. ಬುಧವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಆದರೆ, 1 ಲಕ್ಷಕ್ಕಿಂತ ಕಡಿಮೆ ಮೊತ್ತ ಹೊಂದಿರುವ ಎಸ್‌ಬಿಐ ಉಳಿತಾಯ ಖಾತೆಯ ಗ್ರಾಹಕರು ಈಗಿರುವಂತೆ ಶೇ.3.5 ಬಡ್ಡಿ ಮುಂದುವರಿಯಲಿದೆ.


Advertisement

Udayavani is now on Telegram. Click here to join our channel and stay updated with the latest news.

Next