Advertisement

ಹೂಡಿಕೆಗೆ ಎಸ್ ಬಿ ಐ ನೀಡಲಿದೆ ಉತ್ತಮ ರಿಟರ್ನ್..!

01:24 PM Feb 25, 2021 | |

ನವ ದೆಹಲಿ : ದೇಶದ ಸಾರ್ವಜನಿಕ ವಲಯದಲ್ಲಿ ಅತಿ ದೊಡ್ಡ ಬ್ಯಾಂಕ್ ಎಂದು ಕರೆಸಿಕೊಳ್ಳುವ ಎಸ್ ಬಿ ಐ ಈಗ ಹೊಸ ಯೋಜನೆಯೊಂದನ್ನು ತರುತ್ತಿದೆ. ಉತ್ತಮ ಹೂಡಿಕೆ ಉತ್ತಮ ರಿಟರ್ನ್ ನೀಡುವ ನೂತನ ಯೋಜನೆಯ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹೇಳಿಕೊಂಡಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

ಉತ್ತಮ ರಿಟರ್ನ್ ನೀಡಲಿದೆ ಎಸ್ ಬಿ ಐ ..!?

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಪಡೆಯುವ ಅವಕಾಶವನ್ನು ಒದಗಿಸಿಕೊಡುತ್ತಿದೆ. ಪ್ರತಿ ತಿಂಗಳಿಗೆ 1 ಸಾವಿರ ರೂ. ಹೂಡಿಕೆ ಮಾಡುವ ಮೂಲಕ 1.59 ಲಕ್ಷ ರೂ.ಗಳ ನಿಶ್ಚಿತ ರಿಟರ್ನ್ ಪಡೆಯಬಹುದಾದ ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿದೆ ಎಸ್ ಬಿ ಐ. ಈ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿ ಏನಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಓದಿ : ಫೆ.27 ಕ್ಕೆ ಧಾರವಾಡ ಕೃಷಿ ವಿವಿ 33ನೇ ಘಟಿಕೋತ್ಸವ: 990 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಆರ್ ಡಿ (Recurring deposit) ಖಾತೆಯ ಮೇಲೆ ಉತ್ತಮ ಬಡ್ಡಿ ನೀಡಲಿದೆ ಎಸ್ ಬಿ ಐ..!

Advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಆರ್ ಡಿ ಖಾತೆಯ ಮೇಲೆ ಉತ್ತಮ ಬಡ್ಡಿದರ ನೀಡುತ್ತದೆ. ಎಸ್ ಬಿ ಐ ತನ್ನ ಆರ್ ಡಿ ಸ್ಕೀಮ್ ಮೇಲೆ 3 ರಿಂದ 5 ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ.5.3 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತದೆ ಎಂದು ಎಸ್ ಬಿ ಐ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.

ಹಿರಿಯ ನಾಗರಿಕರಿಗೆ ದೊರಕಲಿದೆ ಹೆಚ್ಚಿನ ಬಡ್ಡಿಯ ಲಾಭ..!
ಒಂದು ವೇಳೆ ಹಿರಿಯ ನಾಗರಿಕರು ಆರ್ ಡಿ ಖಾತೆಗೆ ಹೂಡಿಕೆ ಮಾಡಿದರೆ, ಅವರಿಗೆ ಶೇ.0.80ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಅಂದರೆ, 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಆರ್ ಡಿ ಹೂಡಿಕೆಯ ಮೇಲೆ ಎಸ್ ಬಿ ಐ ಶೇ.6.2 ರಷ್ಟು ಬಡ್ಡಿ ನೀಡುತ್ತದೆ ಎಂದು ಎಸ್ ಬಿ ಐ ಹೇಳಿದೆ.

ಎಸ್ ಬಿ ಐ ನ ಆರ್ ಡಿ ಯೋಜನೆಯ ಪೆನಾಲ್ಟಿ ನಿಯಮ..?!
ಒಂದು ವೇಳೆ ನೀವೂ ಕೂಡ ಆರ್ ಡಿ ಖಾತೆಯನ್ನು ತೆರೆದಿದ್ದರೆ ಮತ್ತು ನಿಗದಿತ ಸಮಯದಲ್ಲಿ ಕಂತು ಪಾವತಿಸದಿದ್ದರೆ, ಎಸ್ ಬಿ ಐ ದಂಡ ಸಹ ವಿಧಿಸುತ್ತದೆ. 5 ವರ್ಷಕ್ಕಿಂತ ಕಡಿಮೆ ಇರುವ ಆರ್ ಡಿ ಗಳಲ್ಲಿ 100 ಕ್ಕೆ 1.5 ರೂ. 5 ವರ್ಷಕ್ಕಿಂತ ಮೇಲ್ಪಟ್ಟ ಆರ್ ಡಿ ಗಳಿಗೆ 100 ರೂಪಾಯಿಗೆ 2 ರೂ. ಪೆನಾಲ್ಟಿ ವಿಧಿಸಲಾಗುತ್ತದೆ. ಅಂದರೆ 1000 ರೂಪಾಯಿಗೆ 20 ರೂಪಾಯಿ ದಂಡ ವಿಧಿಸಲಾಗುತ್ತದೆ. 6 ತಿಂಗಳವರೆಗೆ ಒಂದು ವೇಳೆ ನೀವು ಹಣವನ್ನು ನಿರಂತರವಾಗಿ ಠೇವಣಿ ಮಾಡದಿದ್ದರೆ, ಎಸ್ ಬಿ ಐ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಿ, ಎಲ್ಲಾ ಹಣವನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಲಿದೆ.

ಆರ್ ಡಿ ಯೋಜನೆಯ (ಎಸ್ ಬಿ ಐ ಆರ್ ಡಿ ಸ್ಕೀಮ್) ಸೇವಾ ಶುಲ್ಕ ಎಷ್ಟು..?
ಎಸ್ ಬಿ ಐ ನ ಆರ್ ಡಿ ಯೋಜನೆಗೆ ಒಂದು ವೇಳೆ ನೀವು 3 ರಿಂದ 4 ಬಾರಿ ನಿರಂತರವಾಗಿ ಹಣ ಜಮಾ ಮಾಡದಿದ್ದಲ್ಲಿ, ಬ್ಯಾಂಕ್ ನಿಮ್ಮಿಂದ 10 ರೂ. ಸೇವಾ ಶುಲ್ಕ ಪಡೆಯುತ್ತದೆ.

1.59 ಲಕ್ಷ ರೂ. ಹೇಗೆ ಸಂಪಾದಿಸಬಹುದು..?
ಎಸ್ ಬಿ ಐ ಕ್ಯಾಲ್ಕುಲೇಟರ್ (ಎಸ್ ಬಿ ಐ ಆರ್ ಡಿ ಕ್ಯಾಲ್ಕುಲೇಟರ್) ಪ್ರಕಾರ ಒಂದು ವೇಳೆ ನಿಮ್ಮ ವಯಸ್ಸು 60 ವರ್ಷಕ್ಕಿಂತ ಕಡಿಮೆಯಾಗಿದ್ದರೆ ಹಾಗೂ ತಿಂಗಳಿಗೆ 1000 ರೂ. ಲೆಕ್ಕದಲ್ಲಿ 120 ತಿಂಗಳಿಗೆ ನೀವು ಹಣವನ್ನು ಹೂಡಿಕೆ ಮಾಡಿದಲ್ಲಿ, 10 ವರ್ಷಗಳ ಬಳಿಕ ಶೇ.5.4ರ ಬಡ್ಡಿದರದಲ್ಲಿ 1,59,155 ರೂ.ರಿಟರ್ನ್ ಸಂಪಾದಿಸಬಹುದಾಗಿದೆ.

ಓದಿ : ತಮಿಳುನಾಡಿನ ಡಾ.MGR ಮೆಡಿಕಲ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ನಾಳೆ ಮೋದಿ ಭಾಗಿ.!

Advertisement

Udayavani is now on Telegram. Click here to join our channel and stay updated with the latest news.

Next