ಬೆಂಗಳೂರು: ಸರ್ಕಾರಿ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತೀ¤ಚೆಗೆ ಜಕ್ಕೂರಿನ ಸ್ಟೇಟ್ ಬ್ಯಾಂಕ್ ಲರ್ನಿಂಗ್ ಸೆಂಟರ್‌ನಲ್ಲಿ ಎಸ್‌ಬಿಐ ಯೂತ್ ಫಾರ್ ಇಂಡಿಯಾ – ಅಲುಮ್ನಿ ಮೀಟ್’ಪ್ರಥಮ ಸಭೆ ಆಯೋಜಿಸಿತ್ತು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಗೋಪಾಲನ್ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಂತರ ಅವರು ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿನ ತಮ್ಮ ಅನುಭವಗಳನ್ನು ಯುವಕರಲ್ಲಿ ಹಂಚಿಕೊಂಡರು. 184 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಎಸ್‌ಬಿಐ ಮುಖ್ಯ ಮಹಾಪ್ರಬಂಧಕ ಫಾರೂಕ್ ಶಾಹಬ್ ಮತ್ತು ಎಸ್‌ಬಿಐ ಫೌಂಡೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಕುಮಾರ್ ರೇಖೀ ಭಾರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಕುರಿತು ಸಂವಾದ ನಡೆಸಿದರು. ಫಾರೂಕ್ ಶಾಹಬ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುವ ಮನಸಿತ್ತು.
ಅಂದು ಆಗದ ಕಾರ್ಯಗಳು ಈಗ ಪೂರೈಸಲು ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕಾಗಿ ಬ್ಯಾಂಕಿನ ಕೆಲಸಕ್ಕೆ ಸೇರಿಕೊಂಡೆ. ಇಂದು ಎಸ್‌ಬಿಐ ಯೂತ್ ಫಾರ್ ಇಂಡಿಯಾ ಎಂಬ ಶೀರ್ಷಿಕೆಯಡಿ ಶ್ರಮಿಕರಿಗೆ ಹಾಗೂ ಸಹಾಯ ಮಾಡುವ ಮನಸ್ಸುಳ್ಳವರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಜೀಂ ಪ್ರೇಮ್ ಜೀ ಫೌಂಡೇಷನ್ ಸಿಪಿಒ ಸುದೇಶ್ ವೆಂಕಟೇಶ್, ಅಜೀ ಪ್ರೇಂಜೀ ವಿವಿಯ ಪೊರಗ್ ಶೋಮ್, ಜಿಆರ್‌ಎಎಎಮ್ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜು ಇತರರು ಹಾಜರಿದ್ದರು.