Advertisement
ಇನ್ನು ಮುಂದೆ ಚೆಕ್ ಮೂಲಕ ಮಾಡುವ ಪಾವತಿಗೂ ಶುಲ್ಕ ವಿಧಿಸಲು ಎಸ್‌ಬಿಐ ಕಾರ್ಡ್ ಸಂಸ್ಥೆ ನಿರ್ಧರಿಸಿದೆ. ಅದರಂತೆ, 2 ಸಾವಿರ ರೂ.ಗಳಿಗಿಂತ ಕಡಿಮೆ ಮೊತ್ತದ ಚೆಕ್‌ಗಳನ್ನು ಡ್ರಾಪ್ ಬಾಕ್ಸ್‌ಗೆ ಹಾಕಿದರೆ, ಅದಕ್ಕೆ 100 ರೂ. ಶುಲ್ಕ ವಿಧಿಸುವುದಾಗಿ ಇದೇ ಮೊದಲ ಬಾರಿಗೆ ಸಂಸ್ಥೆ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್‌ಬಿಐ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಜಸುಜಾ, “ಬಾಕ್ಸ್‌ಗಳಲ್ಲಿ ಭಾರೀ ಸಂಖ್ಯೆಯ ಚೆಕ್‌ಗಳನ್ನು ಹಾಕಲಾಗುತ್ತದೆ. ಅವುಗಳನ್ನೆಲ್ಲ ಕ್ಲಿಯರ್ ಮಾಡುವಾಗ ವಿಳಂಬ ಪಾವತಿ ಶುಲ್ಕಗಳ ಸಮಸ್ಯೆ ತಲೆದೋರುತ್ತದೆ. ಇವುಗಳನ್ನು ತಪ್ಪಿಸುವ ಉದ್ದೇಶದಿಂದ ಚೆಕ್ ಪಾವತಿಯನ್ನೇ ಕಡಿಮೆಗೊಳಿಸಲು ಯತ್ನಿಸುತ್ತಿದ್ದೇವೆ,’ ಎಂದಿದ್ದಾರೆ. ಜತೆಗೆ, ಶೇ.8ರಷ್ಟು ಮಂದಿ ಚೆಕ್ ಪಾವತಿಯ ಮೊರೆಹೋಗುತ್ತಾರೆ. ಆ ಪೈಕಿ ಶೇ.6ರಷ್ಟು ಮಂದಿ 2 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಾರೆ. ಹಾಗಾಗಿ, ಉಳಿದ ಶೇ.2ರಷ್ಟು ಮಂದಿಯ ಮೇಲಷ್ಟೇ ಈ ಹೆಚ್ಚುವರಿ ಶುಲ್ಕದ ಪರಿಣಾಮ ಬೀರಲಿದೆ ಎಂದೂ ಹೇಳಿದ್ದಾರೆ ಜಸುಜಾ.