Advertisement

ಎಸ್‌ಬಿಐ ಗೃಹಸಾಲದ ಬಡ್ಡಿ ದರ ಇಳಿಕೆ

01:25 AM Apr 10, 2019 | mahesh |

ಹೊಸದಿಲ್ಲಿ: ಗೃಹ ಸಾಲ ಪಡೆದವರಿಗೆ ಸಿಹಿಸುದ್ದಿ ಎಂಬಂತೆ, 30 ಲಕ್ಷ ರೂ.ಗಳೊಳಗಿನ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.10ರಷ್ಟು ಇಳಿಕೆ ಮಾಡಿ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ ಮಂಗಳವಾರ ಆದೇಶ ಹೊರಡಿಸಿದೆ. ಏ.10ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಇದರಿಂದಾಗಿ, 30 ಲಕ್ಷದೊಳಗಿನ ಗೃಹ ಸಾಲದ ಬಡ್ಡಿ ದರವು ಈ ಹಿಂದೆ ಇದ್ದ ಶೇ.8.70-ಶೇ.9ರಿಂದ ಶೇ.8.60- ಶೇ.8.90ಕ್ಕೆ ಇಳಿಕೆಯಾಗಲಿದೆ. ಅಲ್ಲದೆ, ಎಂಎಲ್‌ಸಿಆರ್‌ ದರವು ಸದ್ಯ ಇರುವ ಶೇ.8.55ರಿಂದ ಶೇ.8.50ಕ್ಕಿಳಿಯಲಿದೆ. ಕಳೆದ ವಾರ ಆರ್‌ಬಿಐ ರೆಪೋ ದರವನ್ನು ಶೇ.0.25ರಷ್ಟು ಇಳಿಕೆ ಮಾಡಿದ ಬೆನ್ನಲ್ಲೇ ಎಸ್‌ಬಿಐ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next