ಮುಂಬಯಿ : ಆರ್‌ಬಿಐ ನಿನ್ನೆ ಗುರುವಾರ ಪ್ರಕಟಿಸಿರುವ ಹಣಕಾಸು ನೀತಿಗೆ ಅನುಗುಣವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), 75 ಲಕ್ಷ ರೂ. ಮೀರಿದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಹತ್ತು ಮೂಲಾಂಕದಷ್ಟು ಇಳಿಸಿದೆ.
ಈ ಹೊಸ ದರವು ಜೂನ್ 15ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ಪ್ರಕಟನೆ ತಿಳಿಸಿದೆ.
ತಿಂಗಳ ವೇತನ ಪಡೆಯುವ ಮಹಿಳೆಗೆ ಈಗಿನ್ನು 75 ಲಕ್ಷ ಮೀರಿದ ಗೃಹ ಸಾಲದ ಮೇಲೆ ಶೇ.8.55 ಹಾಗೂ ಇತರರಿಗೆ ಶೇ.8.60 ಬಡ್ಡಿ ಅನ್ವಯವಾಗಲಿದೆ.
ಆರ್‌ಬಿಐ ಗೃಹ ಸಾಲದ ಮೇಲಿನ ರಿಸ್ಕ್ ವೇಟೇಜ್ ಕಡಿಮೆ ಮಾಡಿರುವುದನ್ನು ಅನುಸರಿಸಿ 75 ಲಕ್ಷ ರೂ. ಮೀರುವ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಸುವ ಮೂಲಕ ನಾವು ಈ ಲಾಭವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ’ ಎಂದು ಎಸ್‌ಬಿಐ ನ್ಯಾಶನಲ್ ಬ್ಯಾಂಕಿಂಗ್ ಎಮ್ ಡಿ ರಜನೀಶ್ ಕುಮಾರ್ ಹೇಳಿದ್ದಾರೆ.