Advertisement

ಎಸ್‌ಬಿಐ ಸಹವರ್ತಿ ಬ್ಯಾಂಕುಗಳ 50,000 ನೌಕರರಿಗೆ ವಿಆರ್‌ಎಸ್‌ ಕೊಡುಗೆ

05:44 PM Feb 17, 2017 | Team Udayavani |

ಹೊಸದಿಲ್ಲಿ : ಎಸ್‌ ಬಿ ಐ ಜತೆಗೆ ವಿಲೀನವಾಗುವ ಐದು ಸಹವರ್ತಿ ಬ್ಯಾಂಕುಗಳು ವಿಲೀನಕ್ಕೆ ಮುನ್ನ ತಮ್ಮ ನೌಕರರಿಗೆ ವಿಆರ್‌ಎಸ್‌ ಕೊಡುಗೆಯನ್ನು ನೀಡಿವೆ. 

Advertisement

ಎಸ್‌ಬಿಐ ಜತೆಗಿನ ವಿಲೀನ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಹಾಗಿದ್ದರೂ ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌  (ಎಸ್‌ಬಿಎಚ್‌) ಈಗಾಗಲೇ ತನ್ನ ನೌಕರರಿಗೆ ವಿಆರ್‌ಎಸ್‌ ಕೊಡುಗೆಯನ್ನು ನೀಡಿದೆ. 

ಇದೇ ರೀತಿಯ ವಿಆರ್‌ಎಸ್‌ ಕೊಡುಗೆ ನೀಡಲಿರುವ ಇತರ ಎಸ್‌ಬಿಐ ಸಹವರ್ತಿ ಬ್ಯಾಂಕ್‌ಗಳೆಂದರೆ ಸ್ಟೇಟ್‌ ಬ್ಯಾಂಕ್‌ ಆಪ್‌ ಬಿಕಾನೇರ್‌ ಆ್ಯಂಡ್‌ ಜೈಪುರ್‌ ಎಸ್‌ಬಿಬಿಜೆ), ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ (ಎಸ್‌ಬಿಎಂ), ಸ್ಟೇಟ್‌ ಬ್ಯಾಂಕ್‌ ಆಪ್‌ ಪಟಿಯಾಲಾ (ಎಸ್‌ಬಿಪಿ), ಸ್ಟೇಟ್‌ ಬ್ಯಾಂಕ್‌ ಆಫ್ ಟ್ರ್ಯಾವಂಕೂರ್‌  (ಎಸ್‌ಬಿಟಿ).

ಕೇಂದ್ರ ಸಂಪುಟ ಮೊನ್ನೆ ಬುಧವಾರ ಈ ಸಹವರ್ತಿ ಬ್ಯಾಂಕುಗಳು ಎಸ್‌ಬಿಐ ಜತೆಗೆ ವಿಲೀನವಾಗುವುದಕ್ಕೆ ಅನುಮೋದನೆ ನೀಡಿದೆ.

ಬ್ಯಾಂಕಿನಲ್ಲಿ 20 ವರ್ಷ ಸೇವೆ ಸಲ್ಲಿಸಿದವರಿಗೆ ಅಥವಾ 2016ರ ನವೆಂಬರ್‌ 30ರಂದು 55 ವರ್ಷ ಪ್ರಾಯ ಆದವರಿಗೆ (ಎಲ್ಲ ಪರ್ಮನೆಂಟ್‌ ಸ್ಟಾಫ್ ಮತ್ತು ಅಧಿಕಾರಿ ವರ್ಗದವರಿಗೆ) ವಿಆರ್‌ಎಸ್‌ ಪಡೆಯುವ ಅರ್ಹತೆ ಇರುತ್ತದೆ. 

Advertisement

ಎಸ್‌ಬಿಐ ಜತೆಗೆ ವಿಲೀನವಾಗುವ ಎಲ್ಲ ಸಹವರ್ತಿ ಬ್ಯಾಂಕ್‌ಗಳ 50,000ಕ್ಕೂ ಅಧಿಕ ನೌಕರರಿಗೆ ವಿಆರ್‌ಎಸ್‌ ಅರ್ಹತೆ ಇರುತ್ತದೆ. 

ವಿಆರ್‌ಎಸ್‌ ಪಡೆಯುವ ನೌಕಕರಿಗೆ, ನಿವೃತ್ತಿಗೆ ಮುನ್ನ ತಮಗಿನ್ನು ಉಳಿದಿರುವ ಸೇವಾವಧಿಗೆ ಸಿಗಬಹುದಾದ ವೇತನದ ಶೇ.50ರಷ್ಟು ಮೊತ್ತವನ್ನು ಎಕ್ಸ್‌ ಗ್ರೇಶಿಯಾ ಆಗಿ ನೀಡಲಾಗುತ್ತದೆ.ಆದರೆ ಇದು 30 ತಿಂಗಳ ಸಂಬಳದ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತದೆ. ಇದು ಮೂಲ ವೇತನ, ಸ್ಟಾಗ್‌ನೇಶನ್‌ ಇನ್‌ಕ್ರಿಮೆಂಟ್‌, ವೃತ್ತಿಪರ ಅರ್ಹತಾ ವೇತನ, ವಿಶೇಷ ವೇತನ ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ವಿಆರ್‌ಎಸ್‌ ಮಂಜೂರಾದ ಐದು ವಾರಗಳ ಒಳಗೆ ಹಣ ಸಿಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next