Advertisement

ಒಂದ್ಸಲ ಹಲೋ ಅನ್ನಿ…

09:48 AM Apr 14, 2020 | mahesh |

ಲಾಕ್‌ಡೌನ್‌ಗೆ ಮನಸ್ಸು ಒಗ್ಗಿಹೋಗಿರಬೇಕಲ್ವಾ? ಎಲ್ಲಾ ಕೆಲಸ ಮುಗೀತಲ್ಲ, ಇನ್ನೇನು ಮಾಡಬೇಕು? ಎನ್ನಬೇಡಿ. ಬೇಕಾದಷ್ಟು ಕೆಲಸ ಬಾಕಿ ಉಳಿದಿದೆ. ಬ್ಯುಸಿ ಷೆಡ್ನೂಲ್‌ನ ಕಾರಣಕ್ಕೆ, ಎಷ್ಟೋ ಸಂಬಂಧಗಳನ್ನು ನವೀಕರಿಸುವುದನ್ನೇ ಮರೆತಿದ್ದೀರಿ ಅಲ್ವಾ? ಜೊತೆಗೆ, ಅಯ್ಯೋ, ಅವನು ತುಂಬಾ ಬ್ಯುಸಿ ಎಂದು ಲೆಕ್ಕಹಾಕಿ, ಎಷ್ಟೋ ಜನ ನಿಮ್ಮಂದ ಉಳಿದಿರುತ್ತಾರೆ. ಬಿಡ್ರೀ, ಅವನು ಯಾವ ಕಾರ್ಯಕ್ರಮಕ್ಕೂ ಬರೊಲ್ಲ ಅಂತ ಷರಾ ಬರೆದುಬಿಟ್ಟಿರುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತ ಇರುವವರಿಗೂ ಹೀಗೆ ಹೇಳಿಬಿಟ್ಟಿರುತ್ತಾರೆ.

Advertisement

ಅದು,  ನಿಮ್ಮ ಸಂಬಂಧಗಳ ಸುತ್ತಲೆಲ್ಲಾ ತಿರುಗಾಡುತ್ತಿರುತ್ತದೆ. ಸುಮ್ಮನೆ ಯೋಚನೆ ಮಾಡಿ, ನಿಮ್ಮ ದೊಡ್ಡಪ್ಪನ ತಂಗಿಯ ಮಗಳ ಹೆಸರು ಗೊತ್ತಿದೆಯಾ? ಚಿಕ್ಕಪ್ಪನ ಮೊಮ್ಮಗಳ ನಾಮಕರಣಕ್ಕೆ ಹೋಗಿದ್ರಾ? ಯಾವುದೂ ನೆನಪಿರುವುದಿಲ್ಲ. ಅವರ ಹೆಸರುಗಳೂ… ಈಗ, ಅವರಿಗೆಲ್ಲ ಒಂದು ಫೋನ್‌ ಮಾಡಿ ಹಲೋ ಹೇಳಿ, ಅವರ ಬದುಕಿನ ನೋವು- ನಲಿವುಗಳಿಗೆ ಕಿವಿಗೊಡಿ. ಆ ಕ್ಷಣದಿಂದಲೇ, ಬಂಧುಗಳು- ಗೆಳೆಯರು ನಿಮ್ಮನ್ನು ನೋಡುವ ಧಾಟಿ ಬದಲಾಗುತ್ತದೆ. ಅರೆ, ಇವನು ಎಷ್ಟು ಒಳ್ಳೆಯವನು, ನಾವಂದುಕೊಡಂತೆ ಇಲ್ಲ ಎಂಬ ಮಧುರ ಭಾವನೆ ಅವರಲ್ಲಿ ಮೂಡುತ್ತದೆ. ನಿಮ್ಮ ಮೊಬೈಲ್‌ ಲಿಸ್ಟ್, ಫೇಸ್‌ ಬುಕ್‌ನಲ್ಲಿರುವ ಫ್ರೆಂಡ್‌ಗಳನ್ನು ನೋಡಿ. ಅಲ್ಲಿ ನಿಮ್ಮ ಶಾಲಾ ದಿನಗಳ ಸ್ನೇಹಿತರು ಇದ್ದರೆ, ತಕ್ಷಣವೇ ಫೋನ್‌ ಮಾಡಿ ಮಾತಾಡಿ. ನಿಮ್ಮ ಹಳೇ ಫೋಟೋಗಳೇ ನಾದರೂ ಇದ್ದರೆ ಶೇರ್‌ ಮಾಡಿಕೊಳ್ಳಿ. ಆಗ, ಮತ್ತೂಂದಷ್ಟು ಘಟನೆಗಳು ಕಣ್ಣ ಮುಂದೆ ಬಂದು ಹೋದಾವು. ಹಳೇ ನೆನಪುಗಳನ್ನು ಗುಡ್ಡೆ ಹಾಕಿಕೊಂಡು ಕೂತರೆ ಮನಸ್ಸು ಪ್ರಫ‌ುಲ್ಲವಾ ಗುತ್ತದೆ, ಗೊತ್ತಾ? ಸಂಬಂಧಗಳ ನವೀಕರಣ ಬಹಳ ಮುಖ್ಯ. ಬ್ಯುಸಿ ಅನ್ನೋ ನೆಪದಲ್ಲಿ, ಕಳೆದುಕೊಂಡಿರುವ ಕೊಂಡಿಯನ್ನು ಸೇರಿಸೋಕೆ ಇದಕ್ಕಿಂತ ಒಳ್ಳೆಯ ಸಮಯ ಬೇಕೆ?

Advertisement

Udayavani is now on Telegram. Click here to join our channel and stay updated with the latest news.

Next