Advertisement
ಜಂಕ್ ಫುಡ್ ಏಕೆ ಬೇಡ?ಜಂಕ್ ಫುಡ್‌ನಲ್ಲಿ ಪೌಷ್ಟಿಕಾಂಶ, ಪ್ರೊಟೀನ್, ವಿಟಮಿನ್ ಅಂಶಗಳು ತೀರ ಕಡಿಮೆ ಪ್ರಮಾಣದಲ್ಲಿರುತ್ತವೆ. ಅಲ್ಲದೇ ರುಚಿಯನ್ನು ಹೆಚ್ಚಿಸಲು ಈ ಆಹಾರಗಳಲ್ಲಿ ಬೆರೆಸುವ ವಿವಿಧ ಪದಾರ್ಥಗಳು, ಹೆಚ್ಚಿನ ಸಕ್ಕರೆ ಮತ್ತು ಕೊಬ್ಬಿನಾಂಶದಿಂದ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡುತ್ತವೆ.
ಮಖ್ಯವಾಗಿ ಜಂಕ್ ಫುಡ್ ಸೇವನೆಗೆ ಇವು ರುಚಿಯಾಗಿ ಮತ್ತು ಬಾಯಿ ಚಪಲ ಹೆಚ್ಚುವಂತೆ ಮಾಡುವುದೇ ಕಾರಣವಾಗಿದೆ. ಇದರಲ್ಲಿರುವ ಹೆಚ್ಚಿನ ಕೊಬ್ಬಿನಾಂಶವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಸಂಭವ ಹೆಚ್ಚು. ಸೋಡಿಯಂನ ಅಂಶ ಅಧಿಕವಾಗಿ ರುವದರಿಂದ ಇದು ಅಧಿಕ ರಕ್ತದೊತ್ತಡದ ಕಾಯಿಲೆಗೂ ಎಡೆಮಾಡಿಕೊಡುತ್ತದೆ. ಮಕ್ಕಳಲ್ಲಿ ವಯಸ್ಸಿಗೆ ಮತ್ತು ದೇಹಕ್ಕೆ ಸಂಬಂಧವೇ ಇಲ್ಲದಂತೆ ತೂಕ ಹೆಚ್ಚಾಗುವುದು, ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆದುಳಿಗೂ ಒಳ್ಳೆಯದಲ್ಲ
ಜಂಕ್ ಫುಡ್ ಸೇವನೆ ಕೇವಲ ದೈಹಿಕ ಮಾತ್ರವಲ್ಲದೇ ಮೆದುಳಿನ ಮೇಲು ದುಷ್ಪರಿಣಾಮ ಉಂಟುಮಾಡುತ್ತದೆ. ಅಧಿಕವಾದ ಬೊಜ್ಜು ಉಂಟಾಗುವುದರಿಂದ ಮೆದುಳಿಗೆ ರಕ್ತ ಸಂಚಾರವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪೌಷ್ಟಿಕಾಂಶ ದೊರೆಯದೇ ದೈಹಿಕವಾಗಿ ಶಕ್ತಿ ಕುಂದಿದ ಅನುಭವ ಆಗುತ್ತದೆ.
Related Articles
Advertisement