Advertisement

ರಾಮನ್‌ ಸ್ಯಾಕ್ಸೋಫೋನ್‌ ಎಫೆಕ್ಟ್,ಮುಕುಲ್‌ ಶಿವಪುತ್ರ ಗಾನಲಹರಿ

04:19 PM Apr 21, 2018 | Team Udayavani |

ಬೆಂಗಳೂರಿನ ಹೆಸರಾಂತ ಸ್ಯಾಕ್ಸೋಫೋನ್‌ ವಾದಕರಾದ ರಾಮನ್‌ ಅವರ ಕಚೇರಿ ನಗರದಲ್ಲಿ ಏರ್ಪಾಡಾಗಿದೆ. ಅವರು ಭಾರತ ಮಾತ್ರವಲ್ಲದೆ ನೇಪಾಳ, ಮಸ್ಕತ್‌, ಸ್ಕಾಟ್‌ಲೆಂಡ್‌, ಇಂಗ್ಲೆಂಡ್‌ ದೇಶಗಳಲ್ಲಿಯೂ ಸಂಚರಿಸಿ ಸಂಗೀತ ಕಛೇರಿ ನೀಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಸುಮಾರು 1800 ಪ್ರದರ್ಶನಗಳನ್ನು ನೀಡಿರುವ ಶ್ರೇಯ ಅವರದು. ರಾಮನ್‌ನವರು ಅಂತಾರಾಷ್ಟ್ರೀಯ ಸಂಗೀತಗಾರರ ಮತ್ತು ಸಂಗೀತ ತಂಡಗಳ ಜೊತೆ ಸ್ಯಾಕ್ಸೋಫೋನ್‌ ನುಡಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿರುವ ಇವರ ಕಛೇರಿ ಕೇಳಲು ಇದೊಂದು ಅವಕಾಶ. ರೆಸ್ಟೋರೆಂಟಿನಲ್ಲಿ ಕಾರ್ಯಕ್ರಮ ಏರ್ಪಾಡಾಗಿರುವುದರಿಂದ ಆಹಾರವನ್ನು ಸವಿಯುವುದರ ಜೊತೆ ಜೊತೆಗೇ ಸಂಗೀತವನ್ನೂ ಆಲಿಸಬಹುದು. 
ಎಲ್ಲಿ?: 1ಕಿ1 ರೆಸ್ಟೋರೇಂಟ್‌, ಎಕ್ಸ್‌ಪ್ರೆಸ್‌ ಬಿಲ್ಡಿಂಗ್‌, ಕ್ವೀನ್ಸ್‌ ರಸ್ತೆ
ಯಾವಾಗ?: ಏಪ್ರಿಲ್‌ 25, ರಾತ್ರಿ 8

Advertisement

ಪಂಡಿತ್‌ ಮುಕುಲ್‌ ಶಿವಪುತ್ರ ಗಾನಲಹರಿ

ಕರ್ನಾಟಕದಲ್ಲಿ ಹುಟ್ಟಿ, ವಿಶ್ವವ್ಯಾಪಿ ಹೆಸರು ಮಾಡಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಕುಮಾರ ಗಂಧರ್ವ ಅವರ ನೆನಪನ್ನು ಈ ನೆಲ ಯಾವತ್ತೂ ಬಿಟ್ಟುಕೊಡುವುದಿಲ್ಲ. ಅವರ ಬಳಿಕ ಮಗ ಪಂ. ಮುಕುಲ್‌ ಶಿವಪುತ್ರ, ಕರುನಾಡಿನೊಂದಿಗೆ ನಾದದ ಕೊಂಡಿಯನ್ನು ಜೋಡಿಸಿಕೊಂಡಿರುವುದೂ ಗೊತ್ತೇ ಇದೆ. ಅವರೀಗ “ಗಂಧರ್ವಗಾನ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ದಕ್ಷಿಣಭಾರತದ ಸಂಗೀತ ಪ್ರೇಮಿಗಳಿಗೆ ಮುಕುಲ್‌ ಹೆಸರು ಚಿರಪರಿಚಿತ. “ಗ್ವಾಲಿಯರ್‌ ಘರಾನಾ’ದಲ್ಲಿ ಹೆಸರು ಮಾಡಿದ ಮುಕುಲ್‌, ತಮ್ಮದೇ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳನ್ನು ಸೆಳೆದವರು. ಮುಕುಲ್‌ ಜತೆ ಹಾರ್ಮೋನಿಯಂನಲ್ಲಿ ಮಧುಸೂದನ್‌ ಭಟ್‌, ತಬಲದಲ್ಲಿ ಸುನಿಲ್‌ ಜೈಫ‌ಲ್ಕರ್‌ ಮನರಂಜಿಸಲಿದ್ದಾರೆ.

ಎಲ್ಲಿ?: ಜೆಎಸ್ಸೆಸ್‌ ವಿವಿ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್‌ ಜಯನಗರ
ಯಾವಾಗ?: ಏ.22, ಭಾನುವಾರ, ಸಂ.5, „ ಪ್ರವೇಶ ದರ: 200- 500 ರೂ.
 

Advertisement

Udayavani is now on Telegram. Click here to join our channel and stay updated with the latest news.

Next