Advertisement

ಸಾವಿತ್ರಿಬಾಯಿ ಪುಲೆ ಪಾಠವೂ ಕಡಿತ?

09:27 PM Jun 02, 2022 | Team Udayavani |

ಬೆಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಎಡಪಂಥೀಯ ಮಹಿಳಾ ಹೋರಾಟಗಾರ್ತಿಯರ ಟಿಪ್ಪಣಿ ಕೈಬಿಟ್ಟಿರುವುದು ಕೂಡ ಕಂಡುಬಂದಿದೆ.

Advertisement

ಸದ್ಯ 7ನೇ ತರಗತಿಯ ಸಮಾಜ ಪಠ್ಯಪುಸ್ತಕಗಳು ಆನ್‌ಲೈನ್‌ ಮೂಲಕ ಲಭ್ಯವಾಗಿದ್ದು, ಇದರಲ್ಲಿ ಮಹಿಳಾ ಸಮಾಜ ಸುಧಾರಕಿಯರಲ್ಲಿ ಸಾವಿತ್ರಿಬಾಯಿ ಪುಲೆ, ತಾರಾಬಾಯಿ ಶಿಂಧೆ, ಪಂಡಿತ್‌ ರಮಾಬಾಯಿ ಈ ಮೂವರು ಮಹಿಳಾ ಹೋರಾಟಗಾರ್ತಿಯ ಪಠ್ಯ ಹೊಸ ಪಠ್ಯಪುಸ್ತಕದಿಂದ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ.

ರೋಹಿತ್‌ ಚಕ್ರತೀರ್ಥ ಸಮಿತಿಯು ಈ ಟಿಪ್ಪಣಿಯನ್ನು ಕೈ ಬಿಟ್ಟಿದ್ದು, ಎಡಪಂಥೀಯ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂರು ಅಂದು ಇದ್ದ ಜಾತಿ ವ್ಯವಸ್ಥೆ ಬಗ್ಗೆ ಸಿಡಿದೆದ್ದಿದರು. ಇದೇ ಕಾರಣಕ್ಕೆ ಮಹಿಳಾ ಸುಧಾರಕಿಯರನ್ನು ತೆಗೆದು ಹಾಕಿದೆ ಎಂಬ ಆರೋಪಗಳು ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next