ಚಂಡೀಗಢ: ಉದ್ಯಮಿ ನವೀನ್ ಜಿಂದಾಲ್ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಅವರ ತಾಯಿ, ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಗುರುವಾರ ಹರಿಯಾಣದ ಹಿಸಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ನಯಾಬ್ ಸಿಂಗ್ ಸೈನಿ, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ 84 ವರ್ಷದ ಸಾವಿತ್ರಿ ಜಿಂದಾಲ್ ಹಾಗೂ ಅವರ ಪುತ್ರಿ ಸೀಮಾ ಬಿಜೆಪಿ ಸೇರ್ಪಡೆಯಾದರು.
“10 ವರ್ಷಗಳ ಕಾಲ ಶಾಸಕಿಯಾಗಿ ಹಿಸಾರ್ ಕ್ಷೇತ್ರವನ್ನು ಪ್ರತಿನಿಧಿಸಿದೆ. ಸಚಿವೆಯಾಗಿ ಸ್ವಾರ್ಥರಹಿತ ವಾಗಿ ಹರಿಯಾಣದ ಸೇವೆ ಮಾಡಿದೆ. ಹಿಸಾರ್‌ನ ಜನರು ನನ್ನ ಕುಟುಂಬ. ಕುಟುಂಬದ ಸಲಹೆ ಮೇರೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಸಾವಿತ್ರಿ ಜಿಂದಾಲ್ ಟ್ವೀಟ್ ಮಾಡಿದ್ದಾರೆ. 2014ರಲ್ಲಿ ಸಾವಿತ್ರಿ ಅವರು ಹಿಸಾರ್‌ನಲ್ಲಿ ಬಿಜೆ ಪಿಯ ಕಮಲ್ ಗುಪ್ತಾ ವಿರುದ್ಧ ಸೋಲುಂಡಿದ್ದರು.
ಸಾವಿತ್ರಿ ಅವರ ಪುತ್ರ ನವೀನ್ ಜಿಂದಾಲ್ ಅವರು 2004ರಿಂದ 2014ರವರೆಗೆ ಕಾಂಗ್ರೆಸ್ ಸಂಸದರಾಗಿ ಕುರುಕ್ಷೇತ್ರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ರವಿವಾರ ಕಾಂಗ್ರೆಸ್ ತೊರೆದು ಬಿಜೆ ಪಿಗೆ ಸೇರ್ಪಡೆ ಯಾದ ಇವ ರಿಗೆ ಕಮಲ ಪಕ್ಷ ಕುರುಕ್ಷೇತ್ರದ ಟಿಕೆಟ್ ಘೋಷಿಸಿದೆ.
ಯಾರಿವರು ಸಾವಿತ್ರಿ ಜಿಂದಾಲ್?
- ಫೋರ್ಬ್ಸ್ ಪಟ್ಟಿ ಪ್ರಕಾರ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ
- ಇವರು ಕೈಗಾರಿಕೋದ್ಯಮಿ, ಮಾಜಿ ಸಚಿ ವ ದಿವಂಗ ತ ಒ.ಪಿ.ಜಿಂದಾಲ್ ಅವರ ಪತ್ನಿ
- ಸಾವಿತ್ರಿ ಅವರ ಒಟ್ಟಾರೆ ಆಸ್ತಿ ಮೌಲ್ಯ 2.42 ಲಕ್ಷ ಕೋಟಿ ರೂ.ಗಳು
- ಹರಿಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು.