Advertisement

ಕೊರಟಗೆರೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

08:34 PM Jan 29, 2023 | Team Udayavani |

ಕೊರಟಗೆರೆ: ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ, ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಶೈಕ್ಷಣಿಕವಾಗಿ ಅಭಿವೃದ್ದಿಹೊಂದಿದೆರೆ ಮಾತ್ರ ಸಮುದಾಯ ವ್ಯಕ್ತಿಗಳು ಮುಖ್ಯವಾಹಿನಿಗೆ ಬರಲು ಸಾದ್ಯ ಎಂದು ತಹಶೀಲ್ದಾರ್ ನರಸಿಂಹಮೂರ್ತಿ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸವಿತಾ ಸಮಾಜದತಿಯಿಂದ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗುರುಗಳ ಹಾದಿಯಲ್ಲಿ ಸಾಗಿ ಆಚಾರ-ವಿಚಾರ ಮೈಗೊಡಿಸಿಕೊಂಡರೆ ಸಮಾಜದಲ್ಲಿ ಸತ್ಪçಜೆಗಳಾಗಬಹುದು, ಸವಿತಾ ಸಮಾಜ ಎಲ್ಲಾ ವರ್ಗದ ಜನರಿಗೂ ತಾತರಮ್ಯವಿಲ್ಲದೆ ಸೇವೆ ನೀಡುತ್ತಿದೆ, ಹಾಗಾಗಿ ಸಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಸದೃಡವಾಗಬೇಕಿದೆ, ಸವಿತಾ ಸಮಾಜ ಶುಭಕಾರ್ಯ ಗಳಿಗೆ ಮುಂದಿರುತ್ತದೆ, ಆದರೆ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಖಂಡರಿಗೆ ಸಾಧ್ಯವಾಗುತ್ತಿಲ್ಲ, ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗಂಗರಾಜು ಮಾತನಾಡಿ ಪೌರಾಣಿಕ ವ್ಯಕ್ತಿಯಾದ ಸವಿತಾ ಮಹಿರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು, ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ, ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ, ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ತಿಳಿಸಿದ ಅವರು ಸವಿತಾ ಸಮಾಜದವರನ್ನು ಸೂರ್ಯವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು, ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮದೇವ ಕೃತಿ ರಚಿಸಿದ್ದಾರೆ, ಇವರ ಮಗಳಾದ ಗಾಯತ್ರಿದೇವಿಯ ಶ್ರೇಷ್ಠಮಂತ್ರವಾದ ಗಾಯಿತ್ರಿ ಮಂತ್ರವನ್ನು ರಚಿಸಿದ್ದಾರೆ.

ಜಿಲ್ಲಾ ಪ್ರತಿನಿದಿ ಎ.ಆರ್.ಉಮೇಶ್ ಮಾತನಾಡಿ ಶಿವನಿಂದ ಸೃಷ್ಙಿಯಿಂದ ಅಡಪದ ಸಹಿತ ಜನಿಸಿದ ಸವಿತ ಮಹರ್ಷಿಗಳು ಸವಿತ ಜನಾಂಗಕ್ಕೆ ಆಪಾರ ಕೂಡುಗೆಗಳನ್ನು ನೀಡಿದ್ದಾರೆ, ಇಂತಹ ಮಹಿರ್ಷಿಗಳ ಜಯಂತಿಯನ್ನು ಕಳೆದ ೫ ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರ ಅವದಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಮ್.ಸಿ.ವೇಣುಗೋಪಾಲ್ ರವರ ಮನವಿಗೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಸವಿತ ಮಹರ್ಷಿ ಜಯಂತಿ ಆಚರಣೆಗೆ ಆದೇಶ ಮಾಡಿದ್ದು ಅವರಿಗೆ ಸವಿತಾ ಸಮಜ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ್ ರಂಗನಾಥ್, ಚಿಕ್ಕರಾಜು, ನಕುಲ್, ತಾಲೂಕು ವಾದ್ಯಗಾರರ ಸಂಘದ ಅಧ್ಯಕ್ಷ ನಾಗರಾಜು, ಸವಿತ ಸಮಾಜದ ಮುಖಂಡರುಗಳಾದ ವಡ್ಡಗೆರೆ ಗ್ರಾ.ಪಂ.ಸದಸ್ಯ ಗೌರಿಶಂಕರ್, ಸಂಘದ ತಾಲೂಕು ಉಪಾಧ್ಯಕ್ಷ ಕೆ.ಜೆ.ರಂಗನಾಥ್, ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್, ಸಂಚಾಲಕ ರಾಘವೇಂದ್ರ, ಖಜಾಂಚಿ ಬಿ.ಟಿ.ನಟರಾಜು, ಸಿ.ಎನ್.ದುರ್ಗಾ ಹೋಬಳಿಯ ರಾಮಣ್ಣ, ಸಹಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next