Advertisement

ಬೆರಳು ನೋಡಿದ ತಕ್ಷಣ ಅಂಗೈನ ಉದ್ದ ತಿಳೀಬೇಕು

06:00 AM Jul 16, 2018 | |

ಹೂಡಿಕೆಯ ವಿಷಯ ಬಂದಾಗ ನಾವೆಲ್ಲಾ ಬೇರೆಯವರನ್ನೇ ಜಾಸ್ತಿ ನಂಬುತ್ತೇವೆ. ಹಾಗೆ ನಂಬುವ ಮುನ್ನ ಅಲ್ಲಿ ಇರಬಹುದಾದ ಸರಿ-ತಪ್ಪು, ಲಾಭ-ನಷ್ಟವನ್ನು ಪರಿಶೀಲಿಸಿ ಹೆಜ್ಜೆ ಇಡಬೇಕು. 

Advertisement

ಉಳಿತಾಯದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಉಳಿತಾಯ ಮಾಡುವುದು ಎಂದರೆ ಖರ್ಚು ಕಡಿಮೆ ಮಾಡುವುದು ಎಂದಷ್ಟೇ ಅರ್ಥವಲ್ಲ. ಬ್ಯಾಂಕಿನಲ್ಲಿ ಹಣ ಹೂಡುವುದು ಎಂಬುದಷ್ಟೇ “ಉಳಿತಾಯ’ಕ್ಕೆ ಇರುವ ವಿವರಣೆಯಲ್ಲ.  ಬದಲಾಗಿ, ಯಾವುದಕ್ಕೆ ಖರ್ಚು ಮಾಡಬೇಕು. ಯಾವುದಕ್ಕೆ ಖರ್ಚು ಮಾಡಬಾರದು ಎನ್ನುವುದನ್ನು ಅರಿಯುವುದು. ಉಳಿತಾಯಕ್ಕೂ, ಅಗತ್ಯ- ಅನಗತ್ಯ ಖರ್ಚುಗಳ ನಡುವಿನ ಅಂತರ ಅರಿಯುವುದಕ್ಕೂ ಅತ್ಯಂತ ಕಡಿಮೆ ಅಂತರ ಇದೆ. ಆದರೆ ಇದನ್ನು ಪಾಲಿಸಿದಾಗ ಮಾತ್ರ ಬಹುದೊಡ್ಡ ವ್ಯತ್ಯಾಸವನ್ನು ನಾವು ಕಾಣುತ್ತೇವೆ.

ಹೂಡಿಕೆ ಶುರುವಾಗುವುದೇ ಉಳಿತಾಯದಿಂದ. ಉಳಿತಾಯದ ಬೀಜ ಬಿತ್ತಿದಾಗ, ಅದು ಸಸಿಯಾಗಿ ಬಳೆಯಲು ಹೂಡಿಕೆ ಅಗತ್ಯವಾಗುತ್ತದೆ. ಇದು ಕೇವಲ ದುಡ್ಡು ದುಡಿಸುವ, ದುಡ್ಡು ಬೆಳೆಸುವ ವಿಷಯ ಅಲ್ಲ. ಬದಲಾಗಿ ನಮ್ಮ ಜೀವನವನ್ನು ಪ್ಲಾನ್‌ ಮಾಡುವ ರೀತಿ. ನಮ್ಮ ಜೀವನದಲ್ಲಿ ಎದುರಾಗುವ ಎಷ್ಟೋ ರೀತಿಯ ಜವಾಬ್ಧಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ವಿಧಾನ ಇದು. ಯಾವುದೇ ರೀತಿಯ ಹೂಡಿಕೆಯನ್ನು ಆರಿಸಿಕೊಳ್ಳುವಾಗಲೂ ನಮಗೆ ಸೂಕ್ತವಾದದ್ದನ್ನು ಆರಿಸಕೊಳ್ಳುವುದು ಅತ್ಯಂತ ಮುಖ್ಯ. ಹೂಡಿಕೆಯ ವಿಷಯ ಬಂದಾಗ ನಮಗೆಲ್ಲರಿಗೂ, ನಮಗಿಂತ ಹೆಚ್ಚಾಗಿ ಬೇರೆಯವರ ಮೇಲೆಯೇ ವಿಶ್ವಾಸ. ನಾವು ನಮ್ಮ ಅನುಭವಕ್ಕಾಗಲೀ, ಈ ಹಿಂದೆ ತಿಂದ ಏಟಿಗಾಗಲೀ ಬೆಲೆ ಕೊಡದೇ, ಬೇರೆಯವರು ಹೇಳುವುದನ್ನೇ ಒಪ್ಪಲು ಮುಂದಾಗುತ್ತೇವೆ.  ಅವರ ಪರಿಣಿತಿಯನ್ನು ನಂಬುತ್ತೇವೆ. ನಂಬುವುದು ತಪ್ಪಲ್ಲ. ಆದರೆ ನಂಬುವ ಮೊದಲು ಅದನ್ನು ಒಮ್ಮೆ ಪರಿಶೀಲಿಸುವುದು ಅಗತ್ಯ. ಹಾಗೇ ಪರಿಶೀಲಿಸುವುದಕ್ಕೆ ಜಾಣ್ಮೆಯ ನಡೆ ಬೇಕು.

ಷೇರು ಪೇಟೆಯ ಬಗೆಗೆ ಒಂದು ಮಾತಿದೆ; ನಾವು ಇವತ್ತು ಮಾಡಬೇಕು ಅಂದೊRಂಡಿರೋದನ್ನ ಷೇರು ಪೇಟೆ ನಿನ್ನೆಯೇ ಮಾಡಿ ಮುಗಿಸಿರುತ್ತದೆ. ಅಂದರೆ, ಷೇರು ಪೇಟೆಯಲ್ಲಿರುವವರು ಯಾವುದೇ ವಿಷಯವನ್ನೂ ತುಂಬಾ ತ್ವರಿತವಾಗಿ ಯೋಚಿಸುತ್ತಾರೆ. ಅವರ ಕೆಲಸ ಮತ್ತು ಯೋಜನೆಗಳು ಯಾವತ್ತೂ ಫಾಸ್ಟ್‌ ಆಗಿರುತ್ತವೆ.  ಉದಾಹರಣೆಗೆ, ಈ ವರ್ಷ ಉತ್ತಮ ಮಳೆ ಇದೆ ಅಂದ ತಕ್ಷಣ, ಮಳೆ ಆಧರಿಸಿದ ವಲಯ ಅಂದರೆ ಕೃಷಿ, ಕೃಷಿಗೆ ಪೂರಕವಾದ ವಲಯ ಅಂದರೆ ರಸಗೊಬ್ಬರ, ಔಷಧಿ, ಕೃಷಿ ಉಪಕರಣ, ಸಲಕರಣೆ ಇಷ್ಟೇ ಅಲ್ಲ; ಉತ್ತಮ ಬೆಳೆ ಬಂದರೆ ರೈತರ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಅದು ವಾಹನ ಇರಬಹುದು, ಬಟ್ಟೆ ಇರಬಹುದು, ಟಿವಿ/ಪ್ರಿಜ್‌ ನಂತಹ ಉತ್ಪನ್ನಗಳಿರಬಹುದು… ಹೀಗೆ ಈ ಎಲ್ಲ ವಲಯಗಳ ಷೇರುಗಳಲ್ಲೂ ಏರಿಕೆ ಕಾಣುತ್ತದೆ. ಇದು ಹೇಗೆ ಅಂದರೆ ಬೆರಳು ನೋಡಿಯೇ ಮುಂಗೈ ಅಳೆಯುವುದು ಅನ್ನುತ್ತಾರಲ್ಲ ; ಹಾಗೆ !

ಮುಗಿಸುವ ಮುನ್ನ
ಇತ್ತೀಚಿನ ದಿನಗಳಲ್ಲಿ, ಔಷಧ ವಲಯದ ಕಂಪನಿಗಳಲ್ಲಿ ತೀವ್ರ ಏರಿಕೆ ಕಾಣಬಹುದು ಎನ್ನುವ ಮಾತು ಇತ್ತು. ಕಳೆದ ಮೂರು ವರ್ಷಗಳಿಂದ ಇಳಿಕೆ ತೋರಿದ್ದ ಈ ವಲಯದಲ್ಲಿ ಏರಿಕೆ ಸಹಜವಾಗಿ ಇರಬಹುದು. ಷೇರುಗಳಲ್ಲಿ ಹಣ ತೊಡಗಿಸುವ ಕೆಲವು ಪಂಟರ್‌ಗಳಿರುತ್ತಾರೆ.  ಅವರು, ಈ ಬೆಳವಣಿಗೆಯನ್ನು ಮೊದಲೇ ಗಮನಿಸಿ, ಔಷಧ ವಲಯದ ಮ್ಯೂಚುವಲ್‌ ಫ‌ಂಡ್‌ ನಲ್ಲಿ ಹಣ ತೊಡಗಿಸಿ ರಿಸ್ಕ್ ಕಡಿಮೆ ಮಾಡಿಕೊಂಡರು. ಇದೇ ಜಾಣತನ. ಹಣ ಹೂಡಿಕೆಯ ಹಿಂದಿನ ಚುರುಕು ಗ್ರಹಿಕೆಗೆ ಉದಾಹರಣೆ ಇದು.

Advertisement

ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next