Advertisement
ಪದೇಪದೆ ಏರಿಳಿತ ಕಾಣುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ತನ್ನ ಕುಟುಂಬದ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಗೃಹಿಣಿಯ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಮನೆಯ ಡಬ್ಬಿಗಳಲ್ಲಿ ಹಣ ಕೂಡಿಡುವ ಹಳೇ ಸಂಪ್ರದಾಯದ ಬದಲಾಗಿ ಇಂದು ಬ್ಯಾಂಕ್‌ಗಳು ಹಾಗೂ ಹೂಡಿಕೆಯ ತಾಣಗಳನ್ನು ಗೃಹಿಣಿಯರು ಹಣ ಉಳಿತಾಯಕ್ಕೆ ಆಶ್ರಯಿಸಿದ್ದಾರೆ.
ಉಳಿತಾಯ ಮಾಡುವ ವಿಷಯದಲ್ಲಿ ಮಹಿಳೆಯರು ಹೆಚ್ಚು ಚಾಣಾಕ್ಷರು. ಮನೆ ಹಾಗೂ ಮಕ್ಕಳ ಭವಿಷ್ಯದ ಬಗೆಗಿನ ಹಣಕಾಸು ಯೋಜನೆಗಳನ್ನು ಮಹಿಳೆಯರು ಉತ್ತಮವಾಗಿ ನಿರ್ಧರಿಸಬಲ್ಲರು. ಹಣಕಾಸು ವ್ಯವಹಾರ/ ಯೋಜನೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.
Related Articles
– ಕುಟುಂಬದ ಹಣಕಾಸು ವ್ಯವಹಾರ, ಹೂಡಿಕೆ, ವಿಮೆ ಮೊದಲಾದ ವಿಚಾರಗಳಲ್ಲಿ ಗೃಹಿಣಿಯರು ಆಸಕ್ತಿ ವಹಿಸಬೇಕು. ಗೃಹಿಣಿಯಾಗಿರುವ ನೆಲೆಯಲ್ಲಿ, ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ತೆರೆದು, ಉಳಿತಾಯ ಮಾಡುವ ಹಣವನ್ನು ಅದರಲ್ಲಿ ಜಮೆ ಮಾಡಬಹುದಾಗಿದೆ. ಫಿಕ್ಸೆಡ್ ಠೇವಣಿ ಖಾತೆ ತೆರೆದು, ಹಣವನ್ನು ಜಮೆ ಮಾಡುವ ಮೂಲಕ ಅದನ್ನು ವೃದ್ಧಿಸಬಹುದು.
Advertisement
– ಪ್ರತೀ ಹೂಡಿಕೆ ಯೋಜನೆಯಲ್ಲಿ ತನ್ನನ್ನು ಸಹ-ಖಾತೆದಾರ (Joint Holder) ರನ್ನಾಗಿ ಮಾಡುವಂತೆ ಪತಿಗೆ ಹೇಳಬೇಕು. ಒಂದು ವೇಳೆ ಅದು ಸಾಧ್ಯವಿಲ್ಲದಿದ್ದಲ್ಲಿ ಅಥವಾ ಪಿಂಚಣಿ ಖಾತೆ ಮುಂತಾದವುಗಳಲ್ಲಿ ಪತ್ನಿಯ ಹೆಸರನ್ನು ನಾಮಿನಿ (ನಾಮನಿರ್ದೇಶನ)ಯಾಗಿ ಸೇರ್ಪಡೆಗೊಳಿಸುವಂತೆ ತಿಳಿಸಬೇಕು. ಇದು ಭವಿಷ್ಯದಲ್ಲಿ ನೆರವಾಗುತ್ತದೆ.
– ಪತಿಯ ಪ್ರತೀ ಹೂಡಿಕೆ, ಬ್ಯಾಂಕ್ ಖಾತೆ, ದಾಖಲೆಗಳು, ಲಾಗಿನ್ ಐಡಿ ಮುಂತಾದವುಗಳ ವಿವರಗಳನ್ನು ಗೃಹಿಣಿಯು ತನ್ನ ಬಳಿ ಇಟ್ಟುಕೊಳ್ಳಬೇಕು. ವಿಮೆ, ಆರೋಗ್ಯ ವಿಮೆ, ಪಿಪಿಎಎಫ್, ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್ ಖಾತೆ ಮುಂತಾದವುಗಳ ಬಗ್ಗೆ ತಿಳಿದುಕೊಂಡಿರಬೇಕು.