Advertisement

“ರಕ್ತದಾನದಿಂದ ಹಲವು ಜೀವಗಳ ರಕ್ಷಣೆ”

01:00 PM May 09, 2021 | Adarsha |

ಮುಂಬಯಿ: ಉತ್ತರ ಮುಂಬಯಿ ಸಂಸದ ಗೋಪಾಲ್ಶೆಟ್ಟಿ ಅವರ ಉತ್ತರ ಮುಂಬಯಿಯಲ್ಲಿ 5,000 ಯುನಿಟ್ರಕ್ತದಾನ ಅಭಿಯಾ ನದ ಅಂಗವಾಗಿ ಕಾಂದಿವಲಿ ಪಶ್ಚಿಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಸ್ಥಳೀಯ ನಗರ ಸೇವಕ ಕಮಲೇಶ್ಯಾಧವ ಅವರ ವತಿಯಿಂದ ನಡೆದ ರಕ್ತದಾನ ಶಿಬಿರವು ಅವರ ಚಾರ್ಕೋಪ್ ಕಾರ್ಯಾಲಯದಲ್ಲಿ ಜರಗಿತು.

Advertisement

ಶಿಬಿರವನ್ನು ಉತ್ತರ ಮುಂಬಯಿಯ ಸಂಸದ, ಕನ್ನಡಿಗ ಗೋಪಾಲ್ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದಾನ ಬಹಳ ಮುಖ್ಯ. ಲಸಿಕೆ ಪಡೆದ ಬಳಿಕ ರಕ್ತದಾನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಲಸಿಕೆ ಪಡೆಯುವ ಮೊದಲು ಎಲ್ಲರು ರಕ್ತದಾನ ಮಾಡಬೇಕು.

 ರಕ್ತದಾನದಿಂದ ಹಲವಾರು ಜೀವಗಳು ಉಳಿಯಲಿದೆ. ಇಂದಿನ ಸಂಕಷ್ಟದ ಸಂದರ್ಭದಲ್ಲಿ ಐದು ಸಾವಿರ ಯುನಿಟ್ರಕ್ತವನ್ನು ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿದ್ದೇವೆ. ನಮ್ಮ ಅಭಿಯಾನಕ್ಕೆ ಎಲ್ಲರಿಂದಲೂ ಸಹಕಾರ ದೊರೆಯಲಿದೆ ಎಂಬ ಭರವಸೆ ನನಗಿದೆ. ಈಗಾಗಲೇ ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಯಶಸ್ಸು ಸಾಧಿಸಿದ್ದೇವೆ. ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದರು.

ಉತ್ತರ ಮುಂಬಯಿ ಶಾಸಕ ರಘುನಾಥ್ಕುಲಕರ್ಣಿ ಅವರೊಂದಿಗೆ ಪ್ರಮಾಣ ಪತ್ರಗಳನ್ನು ರಕ್ತದಾನಿಗಳಿಗೆ ನೀಡಿ ಸಂಸದರು ಅಭಿಂದಿಸಿದರು. ಗೌರವ ಕಾರ್ಯದರ್ಶಿ ಯೋಗೇಶ್ಸಾಗರ್‌, ಕಾರ್ಯದರ್ಶಿ ಬಿನೋದ್ಶೆಲಾರ್‌, ಜಿಲ್ಲಾಧ್ಯಕ್ಷ ಗಣೇಶ್ಖಂಕರ್‌, ಕೌನ್ಸಿಲರ್ಬಾಲಾ ತಾಬ್ಡೆ, ವಾರ್ಡ್ಅಧ್ಯಕ್ಷ ರಾಧೇಶ್ಯಂ, ಮಂಡಲ್ವಾರ್ಡ್ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next