Advertisement

ಮಹದಾಯಿ ಉಳಿಸಿ ಆಂದೋಲನ ಶುರು

06:45 AM Jan 25, 2018 | |

ಖಾನಾಪುರ: ಕರ್ನಾಟಕದಲ್ಲಿ ಮಹದಾಯಿ ಯೋಜನೆ ಜಾರಿಗಾಗಿ ನಿರಂತರ ಪ್ರತಿಭಟನೆ ಹಾಗೂ ಬಂದ್‌ ಆಚರಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಗೋವಾದಲ್ಲಿ ಮಹದಾಯಿ ಬಚಾವೋ ಆಂದೋಲನ ಆರಂಭವಾಗಿದೆ.

Advertisement

ಗೋವಾದ ಮಹದಾಯಿ ಬಚಾವೋ ಆಂದೋಲನದ ಮುಖಂಡ ಆನಂದ ಶಿರೋಡಕರ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಬುಧವಾರದಿಂದ ಮಹದಾಯಿ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಗೋವಾ ರಾಜ್ಯದಲ್ಲಿ ಒಂದು ವಾರದ ಕಾಲ ಈ ಆಂದೋಲನ ನಡೆಯಲಿದೆ.

ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿರುವ ಸುರಲ್‌ದ ಐತಿಹಾಸಿಕ ಸಾತೇರಿ ದುರ್ಗಾಮಾತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆಂದೋಲನದ ಸದಸ್ಯರು ಸುರಲ್‌ನಿಂದಲೇ ಮಹದಾಯಿ ಬಚಾವೋ ಆಂದೋಲನ ಆರಂಭ ಮಾಡಿದರು. ಕಳಸಾ ನಾಲಾ ಸೇರಿ ಮಹದಾಯಿ ಕೊಳ್ಳದ ಹತ್ತು ಉಪನದಿಗಳ ನೀರನ್ನು ಕುಂಭದಲ್ಲಿ ತಂಬಿಕೊಂಡು ಗೋವಾಕ್ಕೆ ತೆರಳಿದರು,

Advertisement

Udayavani is now on Telegram. Click here to join our channel and stay updated with the latest news.

Next