Advertisement
ಲಿಂಗನಮಕ್ಕಿ ಸ್ಟೋರೇಜ್ ಡ್ಯಾಂ ಆದ ಸಾವೇಹಕ್ಲು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಓವರ್ ಫ್ಲೋ ಕಂಡು ಬಂದಿದೆ. 582 ಮೀ ಗರೀಷ್ಠ ಮಟ್ಟದ ಜಲಾಶಯ ಇದಾಗಿದ್ದು 10 ದಿನಗಳ ಹಿಂದೆ ಮಳೆ ಇಲ್ಲದೇ ಬಿಕೋ ಎನ್ನುವಂತಿತ್ತು. ಇದೀಗ ವ್ಯಾಪಕ ಮಳೆಯಾಗುತ್ತಿದ್ದು ಜಲಾಶಯ ಭರ್ತಿಯಾಗಿದೆ.
Related Articles
Advertisement
ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತದೆ.
186 ಅಡಿ ಪೂರ್ಣಮಟ್ಟದ ಡ್ಯಾಮ್ ನಲ್ಲಿ ಈಗ ನೀರಿನ ಮಟ್ಟ 183.50 ಅಡಿಗೆ ತಲುಪಿದೆ. ಒಳ ಹರಿವು 43 ಸಾವಿರ ಕ್ಯೂಸೆಕ್ ಇರುವುದರಿಂದ ಭರ್ತಿಗೆ ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆ ಗೇಟ್ ಗಳನ್ನು ತರೆದು ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.