ಬಲ್ಮಠ: ಬಂಟ ಸಮುದಾಯದ ಧಾರ್ಮಿಕ ಕ್ರೀಡೆ ಸಾಂಸ್ಕೃತಿಕ ಆಚಾರ-ವಿಚಾರಗಳ ಬಗ್ಗೆ ನಮ್ಮ ಯುವ ಜನಾಂಗ ತಿಳಿದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ವರ್ಷಂಪ್ರತಿ ನಡೆಸುವ ಸರಣಿ ಕಾರ್ಯಕ್ರಮ ಗಳಲ್ಲಿ ಯುವಕ ರನ್ನು ಸಂಘಟಿಸುವ ಆವಶ್ಯಕತೆ ಇದೆ ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.
ಜು.30 ರಂದು ಸಂಘದ ವತಿಯಿಂದ ನಡೆಯುವ ಮಿನದನ ಕಾರ್ಯಕ್ರಮದ ಪೂರ್ವಭಾವಿ ಸಭೆ ಖಾಸಗಿ ಹೊಟೇಲ್‌ನಲ್ಲಿ ಜರಗಿದ್ದು, ಅದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಯ ಆಚರಣೆ ಗಳನ್ನು ಯುವಕರು ತಿಳಿದುಕೊಂಡು ಮುಂದುವರಿಸಬೇಕಾಗಿದೆ ಇಲ್ಲವಾದಲ್ಲಿ ನಮ್ಮ ಹಿಂದಿನ ತಲೆಮಾರಿನಿಂದ ಬಂದ ಸಂಸ್ಕೃತಿ ನಾಶವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಘ ಸಂಸ್ಥೆಗಳು ಯುವಕರನ್ನು ಈ ಕಾರ್ಯದಲ್ಲಿ ಸಂಘಟಿಸುವ ಆವಶ್ಯಕತೆ ಇದೆ ಎಂದರು.
ಜಾಗತಿಕ ಮಟ್ಟದಲ್ಲಿ ಬಂಟ ಸಮುದಾಯ ತನ್ನದೇ ಆದ ಛಾಪನ್ನು ಗಳಿಸಿದೆ. ಬಂಟರು ಪರಿಶ್ರಮಿಗಳು, ಕ್ರಿಯಾಶೀಲರು, ಶಾಂತಿಪ್ರಿಯರು. ಆದರೆ ಅದನ್ನು ನಮ್ಮ ನ್ಯೂನತೆ ಎಂದು ಭಾವಿಸಿ, ಅನಾವಶ್ಯಕವಾಗಿ ನಮ್ಮನ್ನು ಕೆಣಕಬಾರದು ಎಂದು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ತಡೆಯಾಜ್ಞೆ ಪ್ರಕರಣದ ಬಗ್ಗೆ ತಿಳಿಸಿದರು.
ಶಶಿಧರ ಶೆಟ್ಟಿ ಜಪ್ಪು, ಲಕ್ಷ್ಮಣ ಶೆಟ್ಟಿ ಕಾವೂರು, ಚಿತ್ತರಂಜನ ರೈ ಪದವು, ವಿಜಯಲಕ್ಷಿ$¾à ಬಿ. ರೈ, ದೇವಿಚರಣ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ಗಳ ರೂಪುರೇಷೆಗಳ ಬಗ್ಗೆ ಕದ್ರಿ ನವನೀ ಶೆಟ್ಟಿ ವಿವರಿಸಿದರು.
ಸದಾಶಯ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಎಂ. ಸಿ. ಶೆಟ್ಟಿ ವಂದಿಸಿದರು. ಸಂಘಟನ ಕಾರ್ಯದರ್ಶಿ ರಾಜಗೋಪಾಲ ರೈ ಕಾರ್ಯಕ್ರಮ ನಿರ್ವಹಿಸಿದರು.