ಹುಳಿಯಾರು: ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನವಾಗಿ ಮಂಜೂರಾಗಿರುವ ಕಟ್ಟಡವನ್ನು ನಿರ್ಮಿಸಲು ಪಟ್ಟಣಕ್ಕಿರುವ ಏಕೈಕ ಆಟದ ಮೈದಾನದಲ್ಲಿ ಸ್ಥಳ ನಿಗದಿ ಮಾಡಿ PWD ಎಂಜಿನಿಯರ್ ಗುರುತು ಹಾಕಿಹೋಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
20ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ಹುಳಿಯಾರು ಪಟ್ಟಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನ ಆಸರೆಯಾಗಿದೆ. ಪ್ರತಿವರ್ಷ ಅಲ್ಲಿಯೇ ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ಕ್ರೀಡಾಕೂಟ, ಆರ್‌ಎಸ್ ಎಸ್ ಶಾಖೆ ಸೇರಿದಂತೆ ಹಿರಿಯ ನಾಗರಿಕರ ವಾಕಿಂಗ್, ಸ್ಥಳಿಯ ಯುವಜನತೆಯ ಆಟ, ವ್ಯಾಯಾಮ ಎಲ್ಲಕ್ಕೂ ಇರುವುದು ಅದೊಂದೇ ಜಾಗ. ಈಗ ಆ ಸ್ಥಳದಲ್ಲಿ ಶಾಲಾ ಕೊಠಡಿಗಳನ್ನು ಕಟ್ಟಲು ಹೊರಟಿರುವುದು ಸ್ಥಳೀಯರನ್ನು ಕೆರಳುವಂತೆ ಮಾಡಿದೆ.
ಇತರೆಡೆ ಸ್ಥಳಾವಕಾಶವಿದ್ದರೂ, ಮೈದಾ ನವೇ ಏಕೆ ಬೇಕು ಎಂಬುದು ಸಾರ್ವಜ ನಿಕರ ಪ್ರಶ್ನೆಯಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಯ ಉದ್ದೇಶವೇ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆವಿಗೆ ಒಂದೆಡೆ ನೀಡುವುದಾಗಿದೆ. ಈ ನಿಟ್ಟಿನಲ್ಲಿ ಹುಳಿಯಾರಿನ ಎಂಪಿಎಸ್ ಶಾಲೆ ಹಾಗೂಕೆಂಕೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು ಮರ್ಜ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ ಮಾಡಿದ್ದಾರೆ.
ಭವಿಷ್ಯ ದಿನಗಳಲ್ಲಿ ಹುಳಿಯಾರಿನಲ್ಲಿರುವ ಪ್ರಾಥಮಿಕ ಶಾಲೆಯೂ ಕೆಂಕೆರೆ ರಸ್ತೆಯ ಶಾಲಾ ಆವರಣಕ್ಕೆ ಶಿಫ್ಟ್ ಮಾಡಲಾಗುತ್ತದೆ. ಹಾಗಾಗಿ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಜೂರಾಗಿರುವ ಕಟ್ಟಡವನ್ನು ಮುಂದೆ ಶಿಫ್ಟ್ ಆಗಲಿರುವ ಕೆಂಕೆರೆ ರಸ್ತೆಯ ಶಾಲಾ ಆವರಣದಲ್ಲಿ ಕಟ್ಟಿದರೆ ಭವಿಷ್ಯದಲ್ಲಿ ಅನುಕೂಲಕರ ಎಂಬ ಸಲಹೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ವರಿಷ್ಠರ ನಿರ್ಲಕ್ಷ್ಯದಿಂದ ಕೈ ತಪ್ಪಿದ ಗ್ರಾಪಂ ಸ್ಥಾನ
ಹೋಬಳಿ ಕ್ರೀಡಾಕೂಟ, ಸಾಂಸ್ಕೃತಿಕಾರ್ಯಕ್ರಮ, ಸಭೆ ಸಮಾರಂಭ ಸೇರಿದಂತೆ ಎಲ್ಲಕ್ಕೂ ಇರುವುದೊಂದೇ ಆಟದ ಮೈದಾನ. ಹಾಗಾಗಿ ಹುಳಿಯಾರು ಮೈದಾನ ಉಳಿಸುವ ಅಗತ್ಯವಿದ್ದು, ಎಂಜಿನಿಯರ್ಗಳ ಮನವೊಲಿಸುವ ಪ್ರಯತ್ನ ಮಾಡಲಾಗುವುದು.
ವೈ.ಸಿ.ಸಿದ್ಧರಾಮಯ್ಯ, ಜಿಪಂ ಸದಸ್ಯ