Advertisement

ಭವಿಷ್ಯಕ್ಕಾಗಿ ಪರಿಸರ ಉಳಿಸಿ

05:31 PM Jun 06, 2021 | Team Udayavani |

ರಾಮನಗರ: ಉತ್ತಮವಾದ ಗಾಳಿ ಬೇಕಾದರೆ ಪರಿಸರ ಉಳಿಯಬೇಕು. ಆಕ್ಸಿಜನ್ ಸಿಗದೆ ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಆಕ್ಸಿಜನ್ ಬೆಲೆ ಕೋವಿಡ್ ನಿಂದ ಗೊತ್ತಾಗಿದೆ. ಜತೆಗೆ ಪರಿಸರದ ಉಳಿವಿನ ಗಂಭೀರತೆಯೂ ಗೊತ್ತಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

Advertisement

ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಪರಿಸರವನ್ನು ಇಂದೇ ಉಳಿಸಿಕೊಳ್ಳಬೇಕಾಗಿದೆ ಎಂದರು.

ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಶ್ಲಾ ಸಿದ ಸಂಸದರು, ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳು ಎಲ್ಲರೂ ವೇತನ ಪಡೆಯುತ್ತಾರೆ. ಆದರೆ ದೇಶದ ಉದ್ದಗಲಕ್ಕೂ ಜೀವದ ಹಂಗು ತೊರೆದು ಜನಸಾಮಾ ನ್ಯರ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಭಿನಂದಿಸಿದರು.

ಕೋವಿಡ್ ಸೋಂಕಿನಿಂದಾಗಿ 567 ಮಂದಿ ವೈದ್ಯರು ಮೃತಪಟ್ಟಿದ್ಧಾರೆ. ಅವರೆಲ್ಲ ಕೋವಿಡ್ ಸೋಂಕಿತರನ್ನು ಉಳಿಸಲು ತೊಡಗಿಸಿಕೊಂಡಿದ್ದರು, ಅವರೆಲ್ಲರನ್ನು ಸೇವೆಯನ್ನು ಸ್ಮರಿಸಿ ನಮನ ಸಲ್ಲಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next