Advertisement

ಪರಿಸರ ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಿ

06:06 PM Aug 30, 2022 | Team Udayavani |

ಅಫಜಲಪುರ: ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 30ಕೋಟಿಯಷ್ಟಿತ್ತು. ಆದರೆ ಈಗ 130 ಕೋಟಿಯಾಗಿದೆ. ಹೆಚ್ಚಾದ ಜನಸಂಖ್ಯೆಯಿಂದ ನಾವು ಪರಿಸರ ನಾಶ ಮಾಡಿದ್ದೇವೆ. ಅದರ ದುಷ್ಪರಿಣಾಮವನ್ನು ಅನುಭವಿಸುತ್ತಿದ್ದೇವೆ ಎಂದು ಮಾಜಿ ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ ಕಳವಳ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಕೌನ್ಸಿಲ್‌, ಅರಣ್ಯ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ವಿಶ್ವ ಜೈವಿಕ ಇಂಧನ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡಿದ ತಪ್ಪಿಗೆ ನಾವೇ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಿಡಮರಗಳನ್ನು ನೆಟ್ಟು ಬೆಳೆಸೋಣ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಶಿವಗೊಂಡ ಪೂಜಾರಿ ಮಾತನಾಡಿ, ಅರಣ್ಯ ಇಲಾಖೆ ಯಾವಾಗಲೂ ಅರಣ್ಯ ರಕ್ಷಣೆಗೆ ಸಿದ್ಧವಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹೆಚ್ಚು ಗಿಡಮರಗಳನ್ನು ಹಚ್ಚುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಬಿಎ 6ನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಕಾವ್ಯ ಜೈವಿಕ ಇಂಧನದ ಲಾಭಗಳ ಕುರಿತು ಮಾತನಾಡಿದರು. ವಿಜ್ಞಾನಿ ಡಾ|ಎಂ.ಎಸ್‌ ಜೋಗದ್‌ ಉಪನ್ಯಾಸ ನೀಡಿದರು. ಮುಖಂಡರಾದ ಡಾ|ಸೂಗೂರೇಶ್ವರ ಆರ್‌.ಎಂ, ಡಾ|ವಿನಾಯಕ ಜಿ.ಕೆ, ಡಾ|ಸುರೇಖಾ ಕರೂಟಿ, ಡಾ|ಸಂಗಣ್ಣ ಎಂ ಸಿಂಗೆ ಆನೂರ, ಡಾ|ಶಾಂತಪ್ಪ ಮೇಲಕೇರಿ, ಗೌರಿಶಂಕರ ಭೂರೆ, ವೈಜನಾಥ ಭಾವಿ, ಹೀರೂ ರಾಠೊಡ, ಮುಖಂಡರಾದ ಸದಾಶಿವ ಮೇತ್ರಿ, ಅಂಬರೀಷ ಬುರಲಿ, ಪ್ರವೀಣ ಕಲ್ಲೂರ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next