Advertisement

ಮಣ್ಣು ಉಳಿಸಿ ಜಾಗೃತಿ ಅಭಿಯಾನ

12:42 PM Apr 30, 2022 | Team Udayavani |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಕೋ ಕ್ಲಬ್‌, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇನ್ನಂಜೆ ಎಸ್‌ ವಿಎಚ್‌ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಜಂಟಿ ಆಶ್ರಯದಲ್ಲಿ ಕಾನ್ಶಿಯಸ್‌ ಪ್ಲಾನೆಟ್‌ – ಸೇವ್‌ ಸೊಯಿಲ್‌ ವಿಷಯದ ಬಗ್ಗೆ ಜಾಗೃತಿ ಅಭಿಯಾನವು ಎಸ್‌ವಿಎಚ್‌ ಪ.ಪೂ. ಕಾರ್ಲಜಿನಲ್ಲಿ ನಡೆಯಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಕೊಯಂಬತ್ತೂರು ಇಶಾ ಫೌಂಡೇಶನ್‌ನ ಸ್ವಯಂಸೇವಕ ಪ್ರವೀಣ್‌ ಭಾಗವಹಿಸಿ ಮಣ್ಣನ್ನು ಉಳಿಸುವ ಅಗತ್ಯದ ಬಗ್ಗೆ ತಿಳಿಸಿ, ಮಣ್ಣನ್ನು ಅಳಿವಿನಂಚಿನಿಂದ ಉಳಿಸಲು, ಮಾನವನು ಎದುರಿಸುತ್ತಿರುವ ದುರಂತ ಸಮಸ್ಯೆಯನ್ನು ಪರಿಹರಿಸಲು ಮತ್ತು ಅಗತ್ಯವಾದ ನೀತಿಗಳನ್ನು ತರಲು ಜಾಗತಿಕ ಆಂದೋಲನವಾಗುತ್ತಿದೆ ಎಂದು ಹೇಳಿದರು. ಈ ಆಂದೋ ಲನವು ಜಾಗತಿಕ ನಾಯಕರ ಬೆಂಬಲವನ್ನು ಗಳಿಸಿದೆ. ಪ್ರಪಂಚದ ಶೇ. 52ರಷ್ಟು ಕೃಷಿಮಣ್ಣು ಈಗಾಗಲೇ ಕ್ಷೀಣಿಸಿದೆ ಮತ್ತು ಮಣ್ಣಿನ ಪುನರುಜ್ಜೀವನಕ್ಕಾಗಿ ನಾವು ಜಾಗೃತಿ ಮೂಡಿಸಿ, ಸರಕಾರದ ನೀತಿಗಳನ್ನು ಪ್ರಾರಂಭಿಸಿದ್ದೇವೆ ಎಂದು ಉಲ್ಲೇಖೀಸಿ ಮಣ್ಣಿನ ಪ್ರಾಮುಖ್ಯತೆಯನ್ನು ತಿಳಿಸಿದರು.

ಇನ್ನಂಜೆ ಎಸ್‌ವಿಎಚ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪುಂಡರೀಕಾಕ್ಷ ಕೊಡಂಚ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರು ಮತ್ತು ಎಸ್‌ವಿಎಚ್‌ ಪ.ಪೂ. ಕಾಲೇಜು ಸಿಬಂದಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು ಉಪಸ್ಥಿತರಿದ್ದರು.

ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ಸಂದೀಪ್‌ ಜೆ ನಾಯಕ್‌ ಸ್ವಾಗತಿಸಿದರು. ಇಕೋ ಕ್ಲಬ್‌ ಸಂಯೋಜಕ ಸುನಿಲ್‌ ಹಲ್ದಾಂಕರ್‌ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ,ವಂದಿಸಿದರು. ಕೊನೆಯಲ್ಲಿ ಇಶಾ ಫೌಂಡೇಶನ್‌ನ ಮಣ್ಣು ಉಳಿಸಿ ಎಂಬ ನೃತ್ಯಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next