Advertisement

ವಿಯೆನ್ನಾ ರಾಯಭಾರ ಕಚೇರಿಯಲ್ಲಿ ಸದ್ಗುರು

01:41 AM Mar 29, 2022 | Team Udayavani |

ವಿಯೆನ್ನಾ: ಈಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು ಸೋಮವಾರ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಭಾರತೀಯರಾಯಭಾರ ಕಚೇರಿಗೆ ಭೇಟಿ ನೀಡಿದ್ದಾರೆ.

Advertisement

ಅಲ್ಲಿ ಅವರು “ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಮಣ್ಣು ಉಳಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ವಿಯೆನ್ನಾದ ವೇಯ್ನ ಮೆಸ್ಸೆ ಕಾಂಗ್ರೆಸ್‌ ಸೆಂಟರ್‌ನಲ್ಲಿ ಆಸ್ಟ್ರಿಯಾದ ಜನತೆಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಮಣ್ಣು ಉಳಿಸುವ ಆವಶ್ಯಕತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 100 ದಿನಗಳ “ಮಣ್ಣು ಉಳಿಸಿ’ ಅಭಿ ಯಾನವನ್ನು ಸದ್ಗುರು ಅವರು ಮಾ.21 ರಂದು ಆರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next