ವಿಶಾಖಪಟ್ಟಣ: 100 ದಿನಗಳ “ಮಣ್ಣು ಉಳಿಸಿ’ ಅಭಿಯಾನ ನಡೆಸುತ್ತಿರುವ ಸದ್ಗುರು ಜಗ್ಗಿ ವಾಸುದೇವ ಅವರು ಶುಕ್ರವಾರ ಆಂಧ್ರಪ್ರದೇಶದ ಕರ್ನೂಲಿನಲ್ಲಿ ಕಾರ್ಯಕ್ರಮ ಭಾಗವಹಿಸಿದರು.
ನಟ ಅದಿವಿ ಶೇಷ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ವೇಳೆ ಆಂಧ್ರಪ್ರದೇಶ ಸರ್ಕಾರವು ಮಣ್ಣು ಉಳಿಸುವ ನಿಟ್ಟಿನಲ್ಲಿ ಸದ್ಗುರು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಈ ಒಡಂಬಡಿಕೆಗೆ ಸಹಿ ಹಾಕಿದ ಭಾರತದ 7ನೇ ರಾಜ್ಯವಿದು.
ರಾಜ್ಯದಲ್ಲಿ ಮಣ್ಣಿನ ಅನುಸರಿಸಬಹುದಾದ ಕಾರ್ಯನೀತಿಯಿರುವ ಕೈಪಿಡಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು ಅವರು, “ಪ್ರಪಂಚ ಮಣ್ಣಿನ ಬಗ್ಗೆ ಮಾತಾಡಬೇಕು.
ಕಳೆದ 90 ದಿನಗಳಲ್ಲಿ 300 ಕೋಟಿ ಜನರು ಮಣ್ಣಿನ ಬಗ್ಗೆ ಮಾತಾಡಿದ್ದಾರೆ’ ಎಂದರು. ರಾಜ್ಯದ ಕೃಷಿ ಸಚಿವ ಗೋವರ್ಧನ್ ರೆಡ್ಡಿ ಸೇರಿ ಅನೇಕರು ಕಾರ್ಯಕ್ರಮದಲ್ಲಿದ್ದರು.