Advertisement

ಮೇ 9ಕ್ಕೆ ವಿಶ್ವಸಂಸ್ಥೆಯಲ್ಲಿ ಸದ್ಗುರು ಮಾತು 

11:21 PM May 05, 2022 | Team Udayavani |

ಹೊಸದಿಲ್ಲಿ: ಈಶ ಫೌಂಡೇಶನ್‌ ಸಂಸ್ಥಾಪಕರಾದ ಜಗ್ಗಿ ವಾಸುದೇವ ಅವರು, ವಿಶ್ವಸಂಸ್ಥೆ ವತಿಯಿಂದ ಮೇ 9ರಿಂದ 20ವರೆಗೆ ಆಯೋಜಿಸಲಾಗಿರುವ “ವಿಶ್ವಸಂಸ್ಥೆಯ ಮರುಭೂಮೀಕರಣ ತಡೆ’ ಕುರಿತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

195 ದೇಶಗಳ ಮುಖಂ ಡರು ಭಾಗವಹಿಸುತ್ತಿದ್ದಾರೆ. ಈ ಶೃಂಗ ಸಭೆಯ ಮೊದಲೆರಡು ದಿನಗಳಲ್ಲಿ ಅವರು ವಿವಿಧ ಮುಖಂಡರಲ್ಲಿ ಮಣ್ಣಿನ ಸಂರ ಕ್ಷಣೆಯ ಮಹತ್ವದ ಕುರಿತಂತೆ ಮಾತುಕತೆ ನಡೆಸಲಿದ್ದು, ಅಧಿವೇಶನವೊಂದರಲ್ಲಿ ಅವರು “ಭೂಮಿ, ಬದುಕು, ಪರಂಪರೆ: ಬರಗಾಲದಿಂದ ಸಮೃದ್ಧಿಯವರೆಗೆ’ ಎಂಬ ವಿಚಾರ ಕುರಿತಾಗಿ ಭಾಷಣ ಮಾಡಲಿದ್ದಾರೆ.

ಜಾಗತಿಕ ಮುಖಂಡರು, ವಿಜ್ಞಾನಿಗಳು, ಮಣ್ಣಿನ ತಜ್ಞರು ಮಣ್ಣನ್ನು ಉಳಿಸಲು ತುರ್ತು ನೀತಿ ಚಾಲಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸದ್ಗುರು ಒತ್ತಾಯ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next