ಹಾಸನ: ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ಮಹಾರಾಜ ಪಾರ್ಕ್ ಕಾಂಕ್ರೀಟಿಕರಣ ಕಾಮಗಾರಿ ನಿಲ್ಲಿಸಿ ಉದ್ಯಾನವನ ಉಳಿಸಬೇಕೆಂದು ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮತ್ತು ಕಾರ್ಯಾಧ್ಯಕ್ಷ ಧರ್ಮೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐತಿಹಾಸಿಕ ಹಿನ್ನೆಲೆಯ ಮಹಾರಾಜ ಪಾರ್ಕ್ ಮುಂದೆಯೂಪಾರ್ಕ್ ಆಗಿಯೇ ಉಳಿಯಬೇಕು ಎನ್ನುವುದು ನಮ್ಮಒಮ್ಮತದ ಒತ್ತಾಯ. ಕಾನೂನಾತ್ಮಕವಾಗಿ ಮತ್ತು ಪ್ರಜಾಸತ್ತಾತ್ಮಕವಾದ ಹೋರಾಟಗಳ ಮುಖಾಂತರ ತಡೆಯಲು ಸಮಿತಿ ಸಿದ್ಧವಾಗಿದೆ ಎಂದರು.
ಕಾಯ್ದೆಯ ಉಲ್ಲಂಘನೆ:ಹಾಸನದ ಮಹಾರಾಜ ಪಾರ್ಕ್‌ಮೈಸೂರು ಮಹಾರಾಜರ ಕಾಲದಿಂದ ಇರುವ ಹಾಸನದ ಏಕೈಕ ದೊಡ್ಡ ಉದ್ಯಾನವನ. ಸಾರ್ವಜನಿಕ ಉದ್ಯಾನವನಗಳಲ್ಲಿ ಈ ರೀತಿಯ ಯಾವುದೇ ಕಾಮಗಾರಿಮಾಡುವುದು 1975ರ ಕರ್ನಾಟಕ ಸರ್ಕಾರಿಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು.
ಸ್ಪಷ್ಟನೆ ನೀಡುತ್ತಿಲ್ಲ: ಮಹಾರಾಜ ಪಾರ್ಕ್‌ನಲ್ಲಿ ಈಗ ನಡೆಸುತ್ತಿರುವ ಅಭಿವೃದ್ಧಿ ಹೆಸರಿನ ಕಾಮಗಾರಿಗಳಿಗೆ ಸರ್ಕಾರದ ಮತ್ತು ಇಲಾಖೆಗಳ ಯಾವುದೇ ರೀತಿಯ ಸ್ಪಷ್ಟವಾದ ಆದೇಶ ಕ್ರಿಯಾ ಯೋಜನೆ ಮತ್ತು ಕಾರ್ಯಾದೇಶ ಇದುವರೆಗೂ ಬಹಿರಂಗಪಡಿಸಿಲ್ಲ. ಈ ಕಾಮಗಾರಿಗಳ ಸಂಬಂಧ ಯಾವುದೇ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ ಎಂದು ದೂರಿದರು.
ನಗರದ ದೊಡ್ಡ ಉದ್ಯಾನವನವನ್ನೇ ಶಾಸಕ ಪ್ರೀತಂಗೌಡ ಮುಗಿಸಲು ಹೊರಟಿರುವಂತಿದೆ. ಪಾರ್ಕ್ ನಲ್ಲಿ ಅವರ ಉದ್ದೇಶಿತ ಕಾಮಗಾರಿ ನಡೆಸುವುದರಿಂದ ಮುಂದೆ ಆಗುವ ಅನಾಹುತ, ಈಗಾಗಲೇ ಆಗಿರುವಕಾನೂನಿನ ಉಲ್ಲಂಘನೆಯನ್ನು ಶಾಸಕರಿಗೆ ಮನವರಿಕೆಮಾಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಶಾಸಕರುನಮ್ಮ ಅಭಿಪ್ರಾಯ ಪರಿಗಣಿಸುತ್ತಿಲ್ಲ ಎಂದು ಹೇಳಿದರು.
ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿಗೌರವಾಧ್ಯಕ್ಷ ಕೆ.ಟಿ.ಶಿವಪ್ರಸಾದ್, ಸಂಚಾಲಕವೆಂಕಟೇಶ್, ನಿರ್ದೇಶಕರಾದ ಸಿ.ಸುವರ್ಣ ಶಿವಪ್ರಸಾದ್, ಎಂ.ಜಿ.ಪೃಥ್ವಿ, ವೆಂಕಟೇಶ್ ಮತ್ತಿತರರು ಇದ್ದರು.