Advertisement

ಜಮಖಂಡಿ ತಾಲೂಕಿನಲ್ಲಿಯೇ ಹಿಪ್ಪರಗಿ ಉಳಿಸಿ

04:42 PM Jun 20, 2018 | |

ಜಮಖಂಡಿ: ನೂತನ ತಾಲೂಕು ರಬಕವಿ-ಬನಹಟ್ಟಿಯಲ್ಲಿ ಜಮಖಂಡಿ ತಾಲೂಕಿನಲ್ಲಿದ್ದ ಹಿಪ್ಪರಗಿ ಗ್ರಾಮವನ್ನು ಸೇರ್ಪಡೆಗೊಳಿಸಿದ್ದನ್ನು ವಿರೋಧಿಸಿ ಸೋಮವಾರ ಹಿಪ್ಪರಗಿ ಗ್ರಾಮಸ್ಥರು ಪಾದಯಾತ್ರೆ ಪ್ರತಿಭಟನೆ ಮೂಲಕ ಉಪವಿಭಾಗಾ ಧಿಕಾರಿ ಎಂ.ಪಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು. ನಗರದ ಎ.ಜಿ.ದೇಸಾಯಿ ವೃತ್ತದಿಂದ ಆರಂಭಗೊಂಡಗೊಂಡ ಪಾದಯಾತ್ರೆ ಪ್ರತಿಭಟನೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಕುಡಚಿ ರಸ್ತೆಯಲ್ಲಿ ಬರತಕ್ಕ ಮಿನಿ ವಿಧಾನಸೌಧ ಆಗಮಿಸುವ ಮೂಲಕ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಹಿಪ್ಪರಗಿ ಗ್ರಾಮ ನೂತನ ತಾಲೂಕಿಗೆ ಸೇರ್ಪಡೆಗೊಳಿಸಿದ್ದರಿಂದ ಹೋಗಿ ಬರಲು ಬಸ್‌ ಸಂಚಾರ ವ್ಯವಸ್ಥೆಯಿಲ್ಲ. ಪ್ರತಿಯೊಂದು ಜಮ ಖಂಡಿ ತಾಲೂಕಿಗೆ ನಂಟಿಕೊಂಡಿರುವ ಶಿಕ್ಷಣ, ವ್ಯಾಪಾರ, ಬ್ಯಾಂಕ್‌ ಸಾಲ ಸೌಲಭ್ಯ ಸಹಿತ ಹತ್ತಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಯಾವುದೇ ಕೆಲಸಕ್ಕಾಗಿ ತಹಶೀಲ್ದಾರ್‌ ಹತ್ತಿರ ಹೋಗಬೇಕಾದರೇ ನೂತನ ತಾಲೂಕು ಬನಹಟ್ಟಿ ರಬಕವಿ-ಬನಹಟ್ಟಿ ಹೋಗಬೇಕು. ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿಯಾಗ ಬೇಕಾದಲ್ಲಿ ಜಮಖಂಡಿ ತಾಲೂಕಿಗೆ ಆಗಮಿಸುವ ಮೂಲಕ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸರಕಾರ ಕೂಡಲೇ ಎಚ್ಚೆತ್ತು ಜಮಖಂಡಿ ತಾಲೂಕಿನಲ್ಲಿ ಹಿಪ್ಪರಗಿ ಗ್ರಾಮ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಜಮಖಂಡಿ ತಾಲೂಕಿನಲ್ಲಿದ್ದ ಕಲ್ಲಹಳ್ಳಿ, ಮಧುರಖಂಡಿ ಹಾಗೂ ಹಿಪ್ಪರಗಿ ಗ್ರಾಮಗಳನ್ನು ನೂತನ ತಾಲೂಕು ರಬಕವಿ-ಬನಹಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದರು. ನಂತರ ಕಲ್ಲಹಳ್ಳಿ, ಮಧುರಖಂಡಿ ಗ್ರಾಮಗಳನ್ನು ಮತ್ತೇ ಜಮಖಂಡಿ ತಾಲೂಕಿಗೆ ಸೇರ್ಪಡೆಗೊಂಡ ಕಾನೂನಿನ ರೀತಿಯಲ್ಲಿ ಹಿಪ್ಪರಗಿ ಗ್ರಾಮವನ್ನು ಸೇರ್ಪಡೆಗೊಳಿಸಬೇಕು. ಕಳೆದ 5 ವರ್ಷಗಳಿಂದ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದು, ಸರಕಾರ ಕಣ್ಮುಚ್ಚಿ ಕುಳಿತ್ತಿದ್ದು, ಈಗಲಾದರೂ ನೋವಿಗಳಿಗೆ ಸರಕಾರ ಸ್ಪಂದಿಸಬೇಕು. ಸರಕಾರ ಪ್ರತಿಭಟನೆಗೆ, ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಅನ್ನಪ್ಪ ಸಾವಳಗಿ, ಅಡಿವೆಪ್ಪ ಗುರವ, ಧರೆಪ್ಪ ಧರಿಗೋಣ, ನಾಗೇಶ ಜತ್ತಿ, ಬಸಪ್ಪ ಫಕೀರಪ್ಪಗೋಳ, ನಿಜಾಮ್‌ ಜಂಗ್ಲಿ, ಶಿವಗೌಡ ಪಾಟೀಲ, ಸಂಗನಗೌಡ ಲಕ್ಕಪ್ಪಗೋಳ, ನಾಗರಾಜ ಕಣಬೂರ, ಎಸ್‌.ಆರ್‌.ಗಾಳಿ, ಹನುಮಂತ ಗಾಣಿಗೇರ, ಅನ್ನಪ್ಪ ಮಂಟೂರ, ಈರಪ್ಪ ತುಪ್ಪದ, ಪರಸಪ್ಪ ಕಾಂಬಳೆ, ಮಹಾಂತೇಶ ತೇಲಿ, ಸಂಗಪ್ಪ ಮಲಕ್ಕಪ್ಪನ್ನವರ, ಚೆನ್ನಪ್ಪ ಮಾಲಿಗಾಂವಿ, ಗಿರಮಲ್ಲ ಕನ್ನೊಳ್ಳಿ, ಪ್ರಭು ಲಕ್ಕಪ್ಪಗೋಳ, ಸದಾಶಿವ ಬಾಗೇವಾಡಿ, ಶ್ರೀಶೈಲ ಪಾಲಭಾವಿ, ಪಾಂಡು ಪೂಜೇರಿ, ಸಂಗಪ್ಪ ದೇಸಾಯಿ, ಮೈಬೂಬ ಜಮಾದಾರ, ಭೀಮಪ್ಪ ಕಾಮಗೊಂಡ ಸಹಿತ ಹಿಪ್ಪರಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next