Advertisement

ಇಂಧನ ಉಳಿಸಿ, ಹಣವನೂ ಉಳಿಸಿ ; ಇಲ್ಲಿವೆ ತೈಲ ಉಳಿಸಲು ದಾರಿಗಳು

10:23 AM Jun 16, 2020 | mahesh |

ಭಾರತ ವಿದೇಶಗಳಿಗೆ ಗರಿಷ್ಠ ಅವಲಂಬಿತವಾಗಿರುವ ಉತ್ಪನ್ನವೆಂದರೆ ತೈಲ. ಪೆಟ್ರೋಲ್‌, ಡೀಸೆಲ್‌ಗಾಗಿ ಪ್ರತೀವರ್ಷ ಲಕ್ಷಾಂತರ ಕೋಟಿ ರೂ.ಗಳನ್ನು
ಭಾರತ ವ್ಯಯಿಸುತ್ತದೆ. ಇದರ ಜೊತೆಗೆ ಈ ತೈಲಗಳ ಬೆಲೆ ಏರುತ್ತಲೇ ಇದೆ. ಇವುಗಳಿಂದ ಪರಿಸರಕ್ಕೂ ಹಾನಿ ತಪ್ಪಿದ್ದಲ್ಲ. ಆದ್ದರಿಂದ ಇದನ್ನು ಮಿತವಾಗಿ ಬಳಸಿದರೆ, ಜನರ ಮತ್ತು ದೇಶದ ಹಣ ಉಳಿಯುತ್ತದೆ. ಪರಿಸರ ಸಂರಕ್ಷಣೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಇಂಧನ ಉಳಿಸಲು ಏನೇನು ಮಾಡಬಹುದು ಎನ್ನುವುದಕ್ಕೆ, ಸರಳ ಸಲಹೆಗಳು ಇಲ್ಲಿವೆ.

Advertisement

ಒಂದೇ ವೇಗದಲ್ಲಿ ಸಂಚರಿಸಿ
ದ್ವಿಚಕ್ರ ವಾಹನ ಸವಾರರು ಒಂದೇ ವೇಗ ಅಥವಾ ಸ್ಥಿರವಾದ ವೇಗದಲ್ಲಿ ಸಂಚರಿಸುವುದು ಉತ್ತಮ. ಇದು ಬೈಕನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದಕ್ಕೆ
ಒಂದು ದಾರಿ. ದಿಢೀರ್‌ ಬ್ರೇಕ್‌ ಹಾಕುವುದು, ನಿಲ್ಲಿಸುವುದನ್ನು ಪದೇಪದೇ ಮಾಡುತ್ತಿದ್ದರೆ, ಅದು ಎಂಜಿನ್ನಿನ ಮೇಲೆ ಒತ್ತಡ ಹೇರುತ್ತದೆ. ಪರಿಣಾಮ ಅದರ ಕಾರ್ಯನಿರ್ವಹಣೆಗೆ ಹೆಚ್ಚಿನ ತೈಲ ಬೇಕಾಗುತ್ತದೆ.

ಟೈರ್‌ನಲ್ಲಿ ಗಾಳಿ ಸರಿಯಾಗಿದೆಯಾ?
ಬೈಕ್‌ ಉತ್ಪಾದಿಸುವ ಕಂಪನಿ, ಟೈರ್‌ನಲ್ಲಿ ಎಷ್ಟು ಗಾಳಿಯಿದ್ದರೆ ಒಳಿತು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತದೆ. ಅದನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಪಾಲಿಸಬೇಕು. ಇದರಿಂದ ಚಕ್ರ ಸರಾಗವಾಗಿ ತಿರುಗುತ್ತದೆ, ಪ್ರಯಾಣದ ಅನುಭವವೂ  ಉತ್ತಮವಾಗಿರುತ್ತದೆ. ಒಂದುವೇಳೆ ಅಳತೆಗಿಂತ ಕಡಿಮೆ ಅಥವಾ ಜಾಸ್ತಿ
ಗಾಳಿಯಿದ್ದರೆ, ಬೈಕ್‌ನ ಸಂತುಲನ ವ್ಯತ್ಯಾಸವಾಗುತ್ತದೆ. ಸಾಮರ್ಥಯ ಕುಗ್ಗುತ್ತದೆ.

ಸಿಗ್ನಲ್‌ನಲ್ಲಿ 30 ಸೆಕೆಂಡ್‌ ಆಫ್ ಮಾಡಿ
ಇದು ಇನ್ನೂ ಒಂದು ಸರಳವಾದ ದಾರಿ. ಸಾಮಾನ್ಯವಾಗಿ ಟ್ರಾಫಿಕ್‌ನಲ್ಲಿ ಕೆಂಪು ಸಂಕೇತ ಬಿದ್ದಾಗ, ಬೈಕ್‌ ಸವಾರರು ಎಂಜಿನ್‌ ಆಫ್ ಮಾಡದೇ, ಹಾಗೆಯೇ ನಿಲ್ಲಿಸಿಕೊಂಡಿರುತ್ತಾರೆ. ಅದರ ಬದಲು ಎಂಜಿನ್‌ ಆಫ್ ಮಾಡಿ, ಕನಿಷ್ಠ 30 ಸೆಕೆಂಡ್‌ ಹಾಗೆ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಇಂಧನ ಉಳಿಯುತ್ತದೆ. ಈಗಿನ ಕಾಲದಲ್ಲಿ ವಾಹನ ಆನ್‌/ ಆಫ್ ಮಾಡುವುದಕ್ಕೆ ಸ್ವಿಚ್‌ಗಳು ಬಂದಿರುವುದರಿಂದ, ಮೇಲಿನ ಕ್ರಮ ಬಹಳ ಉಪಯುಕ್ತ.

ಹೊಗೆಯುಗುಳುವ ಪ್ರಮಾಣ ಹೇಗಿದೆ?
ಆಗಾಗ ಹೊಗೆಯುಗುಳುವ ಪ್ರಮಾಣವನ್ನು ಪರಿಶೀಲಿಸುವುದು ಕಡ್ಡಾಯ. 6 ತಿಂಗಳಿಗೊಮ್ಮೆ ಇದನ್ನು ಮಾಡಬೇಕು. ಒಂದು ವೇಳೆ ಬೈಕ್‌ನಿಂದ ವಿಪರೀತ ಹೊಗೆ ಬರುತ್ತಿದ್ದರೆ, ಅವನ್ನು ದುರಸ್ತಿ ಮಾಡಿಸಲೇಬೇಕಾಗುತ್ತದೆ. ಇದರಿಂದ ಇಂಧನವೂ ಉಳಿತಾಯವಾಗುತ್ತೆ, ಸರ್ಕಾರದ ದಂಡವೂ ತಪ್ಪುತ್ತೆ. ಈ ಹಂತದಲ್ಲಿ ಸ್ಪಾರ್ಕ್‌ಪ್ಲಗ್‌ಗಳು ಸ್ವಚ್ಛವಾಗಿರುವಂತೆ, ವಿದ್ಯುತವಾಹಕಗಳ (ಎಲೆಕ್ಟ್ರೋಡ್‌ಗಳು) ನಡುವೆ ಅಂತರ ಸರಿಯಾಗಿರುವಂತೆ ಎಚ್ಚರವಹಿಸಬೇಕು. ಅಲ್ಲದೇ ಹವಾಶುದ್ಧೀಕರಿಸುವ (ಏರ್‌ಫಿಲ್ಟರ್‌) ಭಾಗವನ್ನೂ ಶುದ್ಧವಾಗಿಟ್ಟು ಕೊಳ್ಳಬೇಕು. ಇಲ್ಲದೇ ಹೋದರೆ ಹೊಗೆ ವಿಪರೀತ ಹೊರಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಿಶ್ರ ಮಾಡಿದ ಇಂಧನವನ್ನು ಬಳಸಬಾರದು. ಅಧಿಕೃತ ತೈಲತಾಣಗಳಲ್ಲಿ ಮಾತ್ರ ಇಂಧನ ಭರ್ತಿ ಮಾಡಿಸಬೇಕು.

Advertisement

ಕ್ಷಮತೆ ಚೆನ್ನಾಗಿಟ್ಟುಕೊಳಿ
ಒಂದು ದ್ವಿಚಕ್ರವಾಹನವನ್ನು ಎಷ್ಟು ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೋ, ಅದರ ಸಾಮರ್ಥಯವೂ ಅಷ್ಟೇ ಚೆನ್ನಾಗಿರುತ್ತದೆ. ಅದಕ್ಕಾಗಿ ಆಗಾಗ ಬೈಕ್‌ನ ಕ್ಷಮತೆಯನ್ನು ಪರಿಶೀಲಿಸುತ್ತಿರಬೇಕು. ಹಾಗೆಯೇ ಎಂಜಿನ್‌ಗೆ ಬಳಸುವ ತೈಲ, ಕೂಲಂಟ್‌, ಬ್ರೇಕ್‌ಗೆ ಬಳಸುವ ತೈಲವನ್ನು ಪರಿಶೀಲಿಸಿ, ಪರಿಸ್ಥಿತಿ ಸರಿಯಿದೆಯೇ ನೋಡಿಕೊಳ್ಳಬೇಕು. ಇದರ ಜೊತೆಗೆ ಸರಪಳಿಯ ಬಿಗಿಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಅಂದರೆ ಅದಕ್ಕೂ ಕೂಡ ಆಗಾಗ, ಅದರ ತೈಲವನ್ನು ಹಾಕಿ ಸುಸ್ಥಿತಿಯಲ್ಲಿಡಬೇಕು. ಇಂತಹ ಸರಪಳಿಗಳು ಬೈಕ್‌ನ ಸುಗಮ ಸಂಚಾರಕ್ಕೆ ನೆರವು ನೀಡುತ್ತವೆ. ಪೆಟ್ರೋಲನ್ನೂ ಉಳಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next