Advertisement

ಜನಪದ ಕಲಾಪ್ರಕಾರಗಳ ಉಳಿಸಿ

04:29 PM Nov 12, 2019 | Suhan S |

ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗೂ ಜೈ ಕರ್ನಾಟಕ ಮಾತೆ ಸಾಂಸ್ಕೃತಿಕ ಮತ್ತು ಕಲಾ ಭಜನೆ ಸಂಘ ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಜಾನಪದ, ತತ್ವಪದ ಗಾಯನ, ಸುಗಮ ಸಂಗೀತ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಕಲಾವಿದ ಮದ್ದೇರಿ ಮುನಿರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಬೇಕಾದಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕಲಾವಿದರು ಇಂತಹ ಕಾರ್ಯ ಕ್ರಮಗಳನ್ನು ಮಾಡುತ್ತಾ ಕಲೆಯನ್ನು ಉಳಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗ್ರಾಪಂ ಸದಸ್ಯ ಭೂಪತಿಗೌಡ ಅಧ್ಯಕ್ಷತೆ ವಹಿಸಿದ್ದದರು. ಗ್ರಾಪಂ ಸದಸ್ಯ ಬಿ.ಚಿಕ್ಕಮುನೇಗೌಡ, ಮಾಜಿ ಸದಸ್ಯ ಎಂ.ಗೋಪಾಲ್‌, ಹನುಮೇಗೌಡ, ವೆಲಗಲಬುರ್ರೆ ನಾಗೇಶ್‌ಮೂರ್ತಿ, ಉಪಾಧ್ಯಾಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಮುಳ್ಳಹಳ್ಳಿ ಯೋಗಿ ನಾರೇಯಣ ತಂಡ, ತೊಟಿ ಮಾರುತಿ ತಂಡ, ಚಿಟ್ನಹಳ್ಳಿ ಅಭಯಾಂಜನೇಯ ಸ್ವಾಮಿ ತಂಡ, ವೆಲಗಲಬುರ್ರೆ ಶ್ರೀವೇಣು ಗೋಪಾಲಸ್ವಾಮಿ ತಂಡ, ಚಿಟ್ನಹಳ್ಳಿ ಅಷ್ಟಮೂರ್ತಮ್ಮ ತಂಡ, ಗದ್ದೆಕಣ್ಣೂರು ತಂಡ, ಅಂಕತಟ್ಟಿ ವೇಣುಗೋಪಾಲ ಸ್ವಾಮಿ ತಂಡ, ಎಸ್‌.ಅಗ್ರಹಾರ ತಂಡ, ಕದರೀಪುರ ತಂಡ, ಆಲೇರಿ ಕೋದಂಡ ರಾಮಸ್ವಾಮಿ ತಂಡ, ಉರಟಿಅಗ್ರಹಾರ ವೇಣುಗೋಪಾಲ ಸ್ವಾಮಿ ತಂಡ, ಜೈಕರ್ನಾಟಕ ಮಾತೆ ಸಾಂಸ್ಕೃತಿಕ ಮತ್ತು ಭಜನೆ ಕಲಾ ಸಂಘ ಅಂಕತಟ್ಟಿ, ಅಂಕತಟ್ಟಿ ಎಂ.ವೆಂಕಟೇಶಪ್ಪ, ತಬಲ ಎನ್‌. ಗೋಪಾಲಪ್ಪ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next