Advertisement

ದೇಶದ ಪರಂಪರೆ ಉಳಿಸಿ-ಬೆಳೆಸಿ: ಸಿದ್ದೇಶ್ವರ ಸ್ವಾಮೀಜಿ

12:59 PM Dec 18, 2021 | Team Udayavani |

ಆಳಂದ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ, ದೇಶದ ಮೂಲ ಸಂಸ್ಕೃತಿ, ಆಚರಣೆಯಿಂದ ದೂರ ಸರಿಯದೇ ಪರಂಪರೆ ಉಳಿಸುವ ಕಾರ್ಯವಾಗಬೇಕು ಎಂದು ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ನುಡಿದರು.

Advertisement

ತಾಲೂಕಿನ ಹೊದಲೂರ ಗ್ರಾಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯ ಸ್ವಾಮಿ ನಿವಾಸದಲ್ಲಿ “ಕನ್ನಡ ಜಾನಪದ ಪರಿಷತ್‌’ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಿದ್ಧೇಶ ಸ್ವಾಮಿ ದಂಪತಿಯ “ಜಾನಪದ ಸೀಮಂತ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಮಾತನಾಡಿ, ಮಗು ಜನಿಸಿದಾಗ ಐದೇಶಿಯಿಂದ ಆರಂಭವಾಗಿ ವ್ಯಕ್ತಿಯ ಜೀವನದ ಕೊನೆ ವರೆಗೆ ವಿವಿಧ ಸಂಸ್ಕಾರ ಮಾಡಲಾಗುತ್ತದೆ. ಪ್ರತಿಯೊಂದು ಸಂಸ್ಕಾರಕ್ಕೆ ಅದರದೇ ಆದ ಹಿನ್ನಲೆ, ಅರ್ಥವಿದೆ. ಸೀಮಂತ ಸಂಸ್ಕಾರವು ತಾಯಿಯಾಗುವ, ಮತ್ತೊಂದು ಜೀವವನ್ನು ನೀಡುವ ಪ್ರಕ್ರಿಯೆಯ ಭಾಗವಾಗಿದೆ. ಈ ಪದ್ಧತಿ ನೂರಾರು ವರ್ಷದಿಂದ ಆಚರಣೆಯಲ್ಲಿದ್ದು, ಇಂತಹ ಆಚರಣೆಗಳು ಪ್ರಸ್ತುತ ದಿನಗಳಲ್ಲಿ ಕಡಿಮೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್‌. ಬಿ. ಪಾಟೀಲ, ಪ್ರಮುಖರಾದ ಸುನೀಲ ಕುಮಾರ ವಂಟಿ, ದೇವೇಂದ್ರಪ್ಪ ಗಣಮುಖೀ, ಶರಣ ಬಸಪ್ಪ ಮಾಲಿಬಿರಾದಾರ ದೇಗಾಂವ, ರೇಣುಕಾಚಾರ್ಯ ಸ್ಥಾವರಮಠ, ಸಿದ್ಧರಾಮ ತಳವಾರ, ಜಗನ್ನಾಥ ಈಟಿ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next